ನಾನು ಕಾಂಗ್ರೆಸ್ ಪಕ್ಷವನ್ನು ಬಿಡೋದು ಇಲ್ಲ, ಹೊಸ ಪಕ್ಷ ಕಟ್ಟುವುದು ಇಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ರಾಜ್ಯದ ಎಂಟು ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಪ್ರಚಾರ ಕಾರ್ಯಕ್ಕೆ ಗೈರುಹಾಜರಾಗಿದ್ದು, ಇದರಿಂದ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದರು. ಏತನ್ಮಧ್ಯೆಯೇ ಸೋಲಿನ ನಂತರ ಕೆಪಿಸಿಸಿ ಕರೆದಿದ್ದ ಆತ್ಮಾವಲೋಕನ ಸಭೆಗೂ ಸಿದ್ದರಾಮಯ್ಯ ಕೈ ಕೊಡುವ ಮೂಲಕ ಹೊಸ ಪಕ್ಷ ಕಟ್ಟುವ ಊಹಾಪೋಹಕ್ಕೆ ಜೀವ ತುಂಬಿದ್ದರು.
ಆದರೆ ಹೊಸ ಪಕ್ಷ ಕಟ್ಟುವ ವದಂತಿಗಳನ್ನು ತಳ್ಳಿಹಾಕುತ್ತಿರುವ ಸಿದ್ದರಾಮಯ್ಯನವರು, ಮತ್ತೊಂದೆಡೆ ಕಾಂಗ್ರೆಸ್‌ನಿಂದ ದೂರ ಸರಿಯುತ್ತಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಬೆಂಬಲಿಗರು ಹೊಸ ಪಕ್ಷ ಕಟ್ಟುವ ವಿಚಾರದ ಬಗ್ಗೆ ಪ್ರಸ್ತಾಪಿಸುತ್ತಲೇ ಇದ್ದಾರೆ.
ಒಟ್ಟಿನಲ್ಲಿ ಹೊಸ ಪಕ್ಷ ಕಟ್ಟುವ ಹಾಗೂ ಮುಂದಿನ ರಾಜಕೀಯ ನಡೆ ಕುರಿತು ಜನವರಿ 5ರ ಬಳಿಕ ಬಹಿರಂಗಪಡಿಸುವುದಾಗಿ ಸಿದ್ದರಾಮಯ್ಯನವರು ಭರವಸೆ ನೀಡಿದ್ದರಾದರೂ ಕೂಡ, ಈವರೆಗೂ ಯಾವುದೇ ಗುಟ್ಟನ್ನು ರಟ್ಟು ಮಾಡಿಲ್ಲ.
|