ಮಧುಗಿರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತಮ್ಮ ಸೋಲಿಗೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಅವರ ಮಕ್ಕಳೇ ಕಾರಣ ಎಂದು ಠೇವಣಿ ಕಳೆದುಕೊಂಡ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಚೆನ್ನಿಗಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.ದೇವೇಗೌಡರು ಮತ್ತು ಅವರ ಮಕ್ಕಳು ಕ್ಷೇತ್ರದ ಒಕ್ಕಲಿಗ ಮತದಾರರ ಕಾಲಿಗೆ ಬಿದ್ದು ಕಳ್ಳ ಅಳು ಅತ್ತಿದ್ದರಿಂದ ಮತದಾರರು ಗೌಡರ ಸೊಸೆಗೆ ಮತ ನೀಡಿ ನನಗೆ ಕೈಕೊಟ್ಟರೆಂದು ಸೋಲಿನ ಕಾರಣವನ್ನು ಹೊರಹಾಕಿದ್ದಾರೆ.ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಪ್ರಧಾನಿಯಾಗಿದ್ದವರು ನನ್ನನ್ನು ಸೋಲಿಸಿ ಪುಣ್ಯ ಕಟ್ಟಿಕೊಳ್ಳಲಿಕ್ಕೆ, ತಮ್ಮ ಸೊಸೆಯನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರು ಎಂದರು.ನಾನು ಗೌಡರ ಮನೆ ನಾಯಿ, ಜವಾನ ಅಂತ ಜನ ಅಂದುಕೊಂಡಿದ್ದರು. ಆದರೆ ಮಧುಗಿರಿಯಲ್ಲಿ ನನ್ನ ಸೋಲಿಸಿದ ಮೇಲೆ ದೇವೇಗೌಡರ ಮನೆಯವರ ಬಗ್ಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಅಲವತ್ತುಕೊಂಡರು. |