ಸರ್ಕಾರಿ ಆಸ್ಪತ್ರೆಗಳ ಶೇ.50ರಷ್ಟು ಔಷಧ ಮಾರಾಟವಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿಸ್ಟಕ್ಸ್ ಸಂಘ ಆಯೋಜಿಸಿದ್ದ ರಾಜ್ಯ ಮಟ್ಟದ ವೈಜ್ಞಾನಿಕ ಮಹಾಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ನೀಡಬೇಕಾದ ಔಷಧ ಬಹುತೇಕ ಮಾರುಕಟ್ಟೆ ಪಾಲಾಗುತ್ತಿದೆ ಎಂದರು.
ಶೇ.40ರಿಂದ50ರಷ್ಟು ಸರ್ಕಾರಿ ಔಷಧಿ ಖಾಸಗಿ ಔಷಧ ಮಳಿಗೆಗಳಲ್ಲಿ ಲಭ್ಯವಾಗುತ್ತಿರುವ ಆರೋಪ ಇದೆ. ಔಷಧ ಪರಿಣತರು ಅದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.
ರಾಜ್ಯ ಸರ್ಕಾರ ಔಷಧಕ್ಕಾಗಿ 116ಕೋಟಿ ರೂ.ಅಯವ್ಯಯದಲ್ಲಿ ಒದಗಿಸಿದ್ದು,ಜಿಲ್ಲಾ ಪಂಚಾಯ್ತಿ ಮೂಲಕ ಶೇ.60 ಹಾಗೂ ಔಷಧ ಉಗ್ರಾಣ ಮೂಲಕ ಶೇ.40ರಷ್ಟು ಹಣವ್ಯಯ ಆಗುತ್ತಿದೆ. ವಿವಿಧ ಯೋಜನೆಯಡಿ 100ಕೋಟಿ ರೂ.ಔಷಧಕ್ಕಾಗಿ ಲಭ್ಯವಾಗುತ್ತಿದೆ ಎಂದರು. |