ಬಿಜೆಪಿ ಮತ್ತು ಜೆಡಿಎಸ್ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜಕೀಯ ರಾಡಿ ಎಬ್ಬಿಸಿದ್ದ ಗಣಿ ಹಗರಣದ ಸೀಡಿ ಬೋಗಸ್ ಎಂದು ಅದನ್ನು ಬಿಡುಗಡೆ ಮಾಡಿದ್ದ ರಾಜ್ಯ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿಯೇ ಖಚಿತಪಡಿಸಿರುವುದಾಗಿ ಚೆನ್ನಿಗಪ್ಪ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಗಣಿ ಸಿಡಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದೆಲ್ಲಾ ಯಾರೋ ಸೃಷ್ಟಿ ಮಾಡಿದ ಬೋಗಸ್ ಸೀಡಿ ಎಂದು ಜನಾರ್ದನ ರೆಡ್ಡಿ ಅವರೇ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿದ್ದಾರಲ್ಲ. ಹೀಗಾಗಿ ಅದರ ವಿಚಾರ ತನಗೇನೂ ಗೊತ್ತಿಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ಅವರ ಸಚಿವ ಸಂಪುಟದಲ್ಲಿ ನಾನು ನಾಮಕಾವಾಸ್ತೆ ಸಚಿವನಾಗಿದ್ದೆ. ಆಗ ಏನೇನು ಅವ್ಯವಹಾರ ಮುಖ್ಯಮಂತ್ರಿಗಳ ಮಟ್ಟದಲ್ಲಿ ನಡೆಯಿತೋ ನನಗೆ ಗೊತ್ತಿಲ್ಲ. ನಾನಂತೂ ಯಾವ ಹಗರಣದಲ್ಲೂ ಭಾಗಿಯಾಗಿಲ್ಲ ಎಂದು ಸಮಜಾಯಿಷಿಕೆ ನೀಡಿದರು. |