ಶಿರಾಡಿ ಘಾಟ್‌ನಲ್ಲಿ ಕೆಎಸ್ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಿದೆ. ಘಾಟಿ ಸಂಪೂರ್ಣ ಕೆಟ್ಟು ಹೋಗಿದ್ದು, ಸುಗಮ ಬಸ್ ಸಂಚಾರ ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದೆ. ಹೀಗಾಗಿ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ಬಹುತೇಕ ಎಲ್ಲಾ ಕೆಎಸ್ಆರ್ಟಿಸಿ ಬಸ್ಸುಗಳು ಮೈಸೂರು ಮಾರ್ಗವಾಗಿ ಸಾಗುತ್ತಿವೆ. ಶಿರಾಡಿ ಘಾಟ್‌ನಲ್ಲಿ ಖಾಸಗಿ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿ ತಿಂಗಳುಗಳೇ ಕಳೆದಿವೆ.
ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೆಎಸ್ಆರ್‌ಟಿಸಿ ತೀರಾ ಇತ್ತೀಚಿನವರೆಗೆ ಬಸ್ಸುಗಳನ್ನು ಓಡಿಸುತಿತ್ತು. ನಿಧಾನವಾಗಿ ಒಂದೊಂದೇ ಬಸ್ಸುಗಳನ್ನು ಈ ಮಾರ್ಗದಿಂದ ಹಿಂತೆಗೆಯಿತು. ಆರಂಭದಲ್ಲಿ ಐರಾವತಗಳು ದಾರಿ ಬದಲಿಸಿದವು. ಬಳಿಕ ರಾಜಹಂಸ. ಈಗ ಕೆಂಪು ಬಸ್ಸುಗಳೂ ಈ ಮಾರ್ಗದಲ್ಲಿ ಹೋಗುತ್ತಿಲ್ಲ.
ಮಾರ್ಗ ಬದಲಿಸಿರುವ ಕುರಿತು ಅಧಿಕಾರಿಗಳು ಯಾವುದೇ ಕಾರಣಕ್ಕೂ ಈ ಮಾರ್ಗದಲ್ಲಿ ಬಸ್ಸನ್ನು ಕೊಂಡೊಯ್ದಲ್ಲಿ ಆಗುವ ಕಷ್ಟ. ನಷ್ಟಗಳಿಗೆ ಚಾಲಕರೇ ಹೊಣೆ ಎಂಬ ಕೆಎಸ್ಆರ್ಟಿಸಿ ಅಲಿಖಿತ ಆದೇಶವನ್ನು ನೀಡಿದೆ. ಜೂನ್ ತಿಂಗಳಲ್ಲಿ ಶಿರಾಡಿ ಘಾಟ್ ಸಂಚಾರಕ್ಕೆ ತೆರೆದುಕೊಂಡಿತು. ನಾಲ್ಕೇ ತಿಂಗಳಲ್ಲಿ ಅದು ಪಾಳು ಬಿದ್ದಿತ್ತು. ಶಿರಾಡಿ ಘಾಟ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಬಸ್ಸುಗಳು ಮಾಣಿ-ಪುತ್ತೂರು-ಮಡಿಕೇರಿ ಮೂಲಕ ಸಂಚರಿಸುತ್ತವೆ.
|