ಆಂಧ್ರಪ್ರದೇಶದಲ್ಲಿ ನಡೆದಿರುವ 'ಸತ್ಯಂ' ಮೋಸಕ್ಕಿಂತ ನೈಸ್ ಹಗರಣವೇ ದೊಡ್ಡದು ಆ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತೊಮ್ಮೆ ಕಿಡಿಕಾರಿದ್ದಾರೆ.ಸತ್ಯಂ ಕಂಪೆನಿಯಲ್ಲಿ ರಾಮಲಿಂಗಾರಾಜು ನಡೆಸಿರುವುದು 7 ಸಾವಿರ ಕೋಟಿ ರೂಪಾಯಿ, ಆದರೆ ಕರ್ನಾಟಕದ ನೈಸ್ ಹಗರಣದಲ್ಲಿ ಸುಮಾರು 30ಸಾವಿರ ಕೋಟಿ ವಂಚನೆ ನಡೆದಿದೆ ಎಂದು ಮತ್ತೊಮ್ಮೆ ಗಂಭೀರವಾಗಿ ಆರೋಪಿಸಿದ್ದಾರೆ.ಗೌಡರು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರ ಕೂಡ ನೈಸ್‌ಗೆ ಪೂರಕವಾಗಿ ನಡೆದುಕೊಳ್ಳುತ್ತಿದೆ ಎಂದರು.ನೈಸ್‌ನಲ್ಲಿ ನಡೆದಿರುವುದು ಮಹಾ ವಂಚನೆ, ಆದರೆ ಆ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೊದಲೇ ನೈಸ್ ಬಗ್ಗೆ ಆಪಾದನೆ ಮಾಡುತ್ತ ಬಂದಿರುವ ಗೌಡರು, ನೈಸ್ ಯೋಜನೆಯಲ್ಲಿ ಅಗತ್ಯಕ್ಕಿಂತ ಹೆಚ್ಚುವರಿ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಅದನ್ನು ಅಶೋಕ್ ಖೇಣಿ ಮಾರಾಟ ಮಾಡಿರುವುದಾಗಿ ಹೇಳಿದ್ದರು. |