ಕೋಮುಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಗೋಹತ್ಯೆ ಕುರಿತಂತೆ,ಇದೀಗ ಗೋ ಹತ್ಯೆ ಸಂಪೂರ್ಣ ನಿಷೇಧಿಸುವ ಸಲುವಾಗಿ ಗೋ ಮಾರಾಟವನ್ನು ಕೂಡ ನಿಷೇಧಿಸುವ ಕಾಯ್ದೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ರಾಜ್ಯ ವಕ್ಫ್ ಖಾತೆ ಸಚಿವ ಡಾ.ಮುಮ್ತಾಜ್ ಅಲಿಖಾನ್ ತಿಳಿಸಿದ್ದಾರೆ.
ಗೋವುಗಳ ಮಾರಾಟ ಮಾಡುವ ಬಹುತೇಕರು ಹಿಂದೂಗಳಾಗಿದ್ದು, ಅವುಗಳನ್ನು ಕೊಳ್ಳುವ ಬಹುತೇಕರು ಮುಸಲ್ಮಾನರಾಗಿದ್ದಾರೆ. ಗೋವುಗಳನ್ನು ಮಾರಾಟ ಮಾಡುವವರು ಇರುವವರೆಗೆ ಕೊಳ್ಳುವವರೂ ಇರುತ್ತಾರೆ. ಇಬ್ಬರ ಮೇಲಿನ ಆಪಾದನೆ ದೂರವಾಗಲು ಗೋ ಮಾರಾಟವನ್ನೇ ಸಂಪೂರ್ಣ ನಿಷೇಧಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗೋವುಗಳ ರಕ್ಷಣೆಗಾಗಿ ಪ್ರತಿ ತಾಲೂಕಿನಲ್ಲಿ ಒಂದು ಗೋ ಶಾಲೆ ತೆರೆಯಲು ಸರ್ಕಾರ ಚಿಂತನೆ ನಡೆಸುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಗೋಶಾಲೆ ತೆರೆಯಲು ಅಲ್ಲಿನ ಆದಿ ಚುಂಚನಗಿರಿ ಮಠಕ್ಕೆ 25ಎಕರೆ ಭೂಮಿ ಮಂಜೂರು ಮಾಡಲಾಗಿದೆ ಎಂದರು. |