ಪರೀಕ್ಷೆಗೆ ಹೆದರಿ ಎ.ಜೆ.ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾದ ಘಟನೆ ಮಂಗಳೂರಿನಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ಎ.ಜೆ.ವೈದ್ಯಕೀಯ ಕಾಲೇಜಿನ ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ ರವೀಂದ್ರ ಪರೀಕ್ಷೆಗೆ ಹೆದರಿ ಹಾಸ್ಟೆಲ್‌ನಲ್ಲಿ ಶನಿವಾರ ಬೆಳಿಗ್ಗೆ ನೇಣು ಹಾಕಿಕೊಂಡಿದ್ದಾರೆ.
ಸಾಯುವ ಮುನ್ನ ತನ್ನ ಪೋಷಕರಿಗೆ ಪತ್ರ ಬರೆದಿಟ್ಟಿರುವ ರವೀಂದ್ರ, ಪರೀಕ್ಷೆಯ ಭಯದಿಂದಾಗಿ ಸಾವನ್ನಪ್ಪುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ರವೀಂದ್ರ ತಿಪಟೂರಿನವರಾಗಿದ್ದು, ಇದೀಗ ಶವ ಪರೀಕ್ಷೆಯ ಬಳಿಕ, ಪೋಷಕರಿಗೆ ಮೃತದೇಹವನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ. |