ಸತ್ಯಂ ಕಂಪೆನಿಯ ಮಹಾವಂಚನೆ ಹಾಗೂ ಅದರ ಸ್ಥಾಪಕ ರಾಮಲಿಂಗರಾಜು ಅವರ ಬಂಧನದಿಂದ ಕರ್ನಾಟಕದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಗೃಹಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.
ಅಲ್ಲದೇ ರಾಜ್ಯ ಸರ್ಕಾರ ಕಳೆದ ವರ್ಷ ಆರಂಭಿಸಿರುವ ಆರೋಗ್ಯ ಕವಚ ಕಾರ್ಯಕ್ರಮದ ಮೇಲೂ ಯಾವುದೇ ದುಷ್ಪರಿಣಾಮ ಬೀರದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ಮೂಲದ ಎಎಂಆರ್‌ಐ ಸಂಸ್ಥೆಯೊಂದು ಸತ್ಯಂಗೆ ಆರ್ಥಿಕ ನೆರವು ನೀಡಿದ್ದು, ಅದು ಕರ್ನಾಟಕ, ಗುಜರಾತ್ ಹಾಗೂ ಆಂಧ್ರ ಪ್ರದೇಶದಲ್ಲಿ ತುರ್ತು ಅಂಬ್ಯುಲೆನ್ಸ್ ಸೇವೆಗಾಗಿ '108ಕ್ಕೆ ಡಯಲ್ ಮಾಡಿ' ಎಂಬ ಯೋಜನೆಯನ್ನು ಜಾರಿಗೊಳಿಸಿತ್ತು.
ಎಎಂಆರ್‌ಐ ಸ್ವತಂತ್ರ ಟ್ರಸ್ಟ್ ಆಗಿದ್ದು, ಯಾವುದೇ ಕಾರಣಕ್ಕೂ ಸತ್ಯಂ ಪ್ರಕರಣದಿಂದ ಈ ಯೋಜನೆಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಭರವಸೆ ನೀಡಿರುವುದಾಗಿ ಡಾ.ಆಚಾರ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದ್ದಾರೆ.
ಅಲ್ಲದೇ ಸತ್ಯಂನ ಮೇತಾಸ್ ಕಂಪೆನಿಗ ವಹಿಸಿದ ಮೂಲಭೂತ ಸೌಕರ್ಯಗಳ ಗುತ್ತಿಗೆ ಯೋಜನೆಯ ಮೇಲೆ ಪರಿಣಾಮ ಬೀರಲಿದೆ ಎಂಬ ಪ್ರಶ್ನೆಗೆ ಮುಖ್ಯಮಂತ್ರಿಗಳ ಪ್ರಿನ್ಸಿಪಲ್ ಸೆಕ್ರೆಟರಿಯಾದ ವಿ.ಪಿ.ಬಳಿಗಾರ್ ಅವರು,ಅಂತಹ ಯಾವುದೇ ಭಯದ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು. ಕಂಪೆನಿಗೆ ವಹಿಸಿದ ಎಲ್ಲಾ ಯೋಜನೆಗಳನ್ನು ಪೂರೈಸಿ ಕೊಡುವುದಾಗಿ ಭರವಸೆ ಎಂದರು. |