ನಗರದ ಜಯನಗರ 3ನೇ ಬ್ಲಾಕ್ ಸಮೀಪ ವಾಸವಾಗಿದ್ದ ವೃದ್ದ ದಂಪತಿಗಳ ಕತ್ತು ಕುಯ್ದು ಭೀಕರವಾಗಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಡೆದಿದೆ.
ಜಯನಗರ ಮೂರನೇ ಬ್ಲಾಕ್ ಎರಡನೇ ಮೈನ್ ಖಜಾನಾ ಜ್ಯುವೆಲ್ಲರ್ಸ್ ಬಳಿ ವಾಸಿಸುತ್ತಿದ್ದ ನಿವೃತ್ತ ಮಹಾಲೆಕ್ಕ ಪರಿಶೋಧಕ ವೈ.ಎಸ್.ವಿ.ರಂಗನ್(80) ಹಾಗೂ ಪತ್ನಿ ವಸಂತ(75) ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದಾರೆ.
ರಂಗನ್ ಅವರ ಎಂಟು ಮಂದಿ ಮಕ್ಕಳು ವಿದೇಶದಲ್ಲಿ ನೆಲೆಸಿದ್ದು ಜಯನಗರದಲ್ಲಿನ ಮನೆಯನ್ನು 7 ಕೋಟಿ ರೂ.ಗಳಿಗೆ ಇತ್ತೀಚೆಗಷ್ಟೇ ಮಾರಾಟ ಮಾಡಿದ್ದರು. ಅದು ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. |