ಮರುಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರಕ್ಕೆ ಹೋಗದಿರುವುದು ನನ್ನ ದೃಷ್ಟಿಯಲ್ಲಿ ಅಪರಾಧವಲ್ಲ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಹಿಂದೆಯೂ ಅನೇಕರು ತಮ್ಮನ್ನು ತಪ್ಪಾಗಿ ಭಾವಿಸಿಲ್ಲ ಎಂದು ಪ್ರತಿಪಾದಿಸಿದರಲ್ಲದೇ, ಸಂಕ್ರಾಂತಿಯ ನಂತರ ತಾವು ಬೇರೆ ಪಕ್ಷಕ್ಕೆ ಹೋಗುವ ಮತ್ತು ಹೊಸ ಪಕ್ಷ ಕಟ್ಟುವ ಬಗೆಗಿನ ವರದಿಗಳೆಲ್ಲಾ ಬರೀ ಸುಳ್ಳಿನ ಕಂತೆ. ತಾನು ಯಾವತ್ತಿದ್ದರೂ ಕಾಂಗ್ರೆಸ್ ಶಾಸಕ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ತನಗೆ ಲೋಕಸಭೆಗೆ ಸ್ಪರ್ಧಿಸುವ ಇಚ್ಚೆಯಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ಹಾಗೂ ಶೂನ್ಯ ವೇಳೆ ಇರಬೇಕಾಗಿತ್ತು. ಆದರೆ ಅದನ್ನು ತೆಗೆದಿದ್ದರಿಂದ ಇದು ತನ್ನ ಗಂಭೀರತೆ ಕಳೆದುಕೊಂಡಿದ್ದು, ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಕೈಗೊಳ್ಳುವಷ್ಟಕ್ಕೆ ಸೀಮಿತವಾದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
|