2007-08ರ ಸಾಲಿನ ಚಲನಚಿತ್ರ ಪ್ರಶಸ್ತಿ ಭಾನುವಾರ ಪ್ರಕಟಗೊಂಡಿದ್ದು, ಗುಲಾಬಿ ಟಾಕೀಸ್ ಪ್ರಥಮ ಸ್ಥಾನ, ಮೊಗ್ಗಿನ ಜಡೆ ದ್ವಿತೀಯ ಹಾಗೂ ಮಾತಾಡ್ ಮಾತಾಡ್ ಮಲ್ಲಿಗೆ ತೃತೀಯ ಸ್ಥಾನ ಪಡೆದಿದೆ.
ಅತ್ಯುತ್ತಮ ಸಾಮಾಜಿಕ ಚಿತ್ರವಾಗಿ ಬನದ ನೆರಳು ಪ್ರಶಸ್ತಿ ಪಡೆದಿದ್ದರೆ, ಗುಲಾಬಿ ಟಾಕೀಸ್ 3 ಹಾಗೂ ಆ ದಿನಗಳು 3 ಪ್ರಶಸ್ತಿಗಳನ್ನು ತಮ್ಮ ಬಗಲಿಗೆ ಹಾಕಿಕೊಂಡಿವೆ.
ಅಲ್ಲದೇ ನಟ ವಿಷ್ಣುವರ್ಧನ್ ಡಾ.ರಾಜ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಉಳಿದಂತೆ ಮಿಲನ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಪುನೀತ್ ರಾಜ್‌ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ, ಉಮಾಶ್ರೀ ಅತ್ಯುತ್ತಮ ನಟಿ (ಗುಲಾಬಿ ಟಾಕೀಸ್ ಚಿತ್ರ)ಅತ್ಯುತ್ತಮ ಪೋಷಕ ನಟ ರಾಜೇಶ್, ಅತ್ಯತ್ತಮ ಪೋಷಕ ನಟಿ ಸ್ಮಿತಾ (ಅವ್ವ ಚಿತ್ರ), ಅತ್ಯುತ್ತಮ ಸಂಗೀತ ನಿರ್ದೇಶಕ ಸಾಧು ಕೋಕಿಲ, ಅತ್ಯುತ್ತಮ ನಿರ್ದೇಶಕರಾಗಿ ಗಿರೀಶ್ ಕಾಸರವಳ್ಳಿ, ಅತ್ಯುತ್ತಮ ಹಿನ್ನೆಲೆ ಗಾಯಕರಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅತ್ಯುತ್ತಮ ಛಾಯಾಗ್ರಹಕ ಪ್ರಶಸ್ತಿ-ಎಚ್.ಸಿ,ವೇಣು, ಅತ್ಯುತ್ತಮ ಸಂಭಾಷಣೆ-ಅಗ್ನಿ ಶ್ರೀಧರ್,ಅತ್ಯುತ್ತಮ ಕಥೆ ಬರಹಗಾರ ಪಿ.ಲಂಕೇಶ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
|