ರಾಜ್ಯ ಸರ್ಕಾರ 2007-08 ನೇ ಸಾಲಿನ ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆ ವಿವಾದಗಳು ಕೂಡಾ ಭುಗಿಲೆದ್ದಿದೆ. ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರದ ನಿರ್ಮಾಪಕ ಕೆ.ಮಂಜು ಹಾಗೂ ಆ ದಿನಗಳು ಚಿತ್ರದ ಸಂಭಾಷಣೆಕಾರ ಅಗ್ನಿ ಶ್ರೀಧರ್ ಪ್ರಶಸ್ತಿ ನಿರಾಕರಿಸಿದ್ದಾರೆ.ಕೆ.ಮಂಜು ನಿರ್ಮಾಣದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರಕ್ಕೆ 3ನೇ ಅತ್ಯುತ್ತಮ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಆಯ್ಕೆಯಲ್ಲಿ ಲಾಬಿ ನಡೆದಿದೆ. ಸರ್ಕಾರ ತಮ್ಮ ಚಿತ್ರವನ್ನು 3ನೇ ಸ್ಥಾನಕ್ಕೆ ತಳ್ಳಿ ಅನ್ಯಾಯವೆಸಗಿದೆ. ಮೊಗ್ಗಿನ ಜಡೆ ಚಿತ್ರಕ್ಕಿಂತ ನಮ್ಮದು ಯಾವುದರಲ್ಲಿ ಕಡಿಮೆ ಇದೆ ಎಂದು ಮಂಜು ಪ್ರಶ್ನಿಸಿದ್ದಾರೆ.ತಮ್ಮ ಚಿತ್ರಕ್ಕೆ ಉತ್ತಮ ಚಿತ್ರ ಪ್ರಶಸ್ತಿ ಬರಬೇಕಿತ್ತು ಎನ್ನುವುದು ಅಗ್ನಿ ಶ್ರೀಧರ್ ಅಪೇಕ್ಷೆ. ರಾಜ್ಯದಲ್ಲಿ ಗಿರೀಶ್ ಕಾಸರವಳ್ಳಿ ಬಿಟ್ಟರೆ ಬೇರೆ ಪ್ರತಿಭಾವಂತರಿಲ್ಲವೇ? ಎರಡು ವರ್ಷಕ್ಕೊಮ್ಮೆ ಅವರಿಗೇ ಪ್ರಶಸ್ತಿ ಕೊಡಲು ಆಯ್ಕೆ ಸಮಿತಿಗೆ ಸಂಕೋಚವಾಗುವುದಿಲ್ಲವೇ? ಕಾಸರವಳ್ಳಿಗೆ ಪ್ರಶಸ್ತಿ ಬಂದರೆ ನಗುವ ಪರಿಸ್ಥಿತಿ ಬಂದಿದೆ ಎನ್ನುವುದು ಶ್ರೀಧರ್ ಆಕ್ರೋಶ. ಯಾವ ಮಾನದಂಡ ಆಧರಿಸಿ ಇವರು ಪ್ರಶಸ್ತಿ ಕೊಡುತ್ತಾರೆ. ಹೆಸರಿನಿಂದ ಮಾತ್ರ ಪ್ರಶಸ್ತಿ ಕೊಡುತ್ತಾರೆಯೇ. ಈ ಬಗ್ಗೆ ಸಂವಾದಕ್ಕೆ ಬರಲಿ ಎಂದು ಶ್ರೀಧರ್ ಆಗ್ರಹಿಸಿದ್ದಾರೆ. |