ಚಂಬಲ್ ಕಣಿವೆ ಡಕಾಯಿತರು ಸರ್ಕಾರದ ರೂಪದಲ್ಲಿ ಕರ್ನಾಟಕಕ್ಕೆ ಬಂದಂತೆ ಬಿಜೆಪಿ ಸರ್ಕಾರ ವರ್ತಿಸುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಸಂಪನ್ಮೂಲ ಸಂಗ್ರಹಣೆ ಉದ್ದೇಶದಿಂದ ಕಂದಾಯ ನಿವೇಶನಗಳಲ್ಲಿ ನಿರ್ಮಾಣವಾದ ಕಟ್ಟಡಗಳ ನೋಂದಣಿಯಂತಹ ನಿರ್ಧಾರವನ್ನು ಸರ್ಕಾರ ಕೈಗೊಂಡಿರುವುದು ಸ್ಪಷ್ಟವಾಗಿದೆ. ಇದರಿಂದಾಗಿ ಚಂಬಲ್ ಕಣಿವೆ ಡಕಾಯಿತರು ಸರ್ಕಾರದ ರೂಪದಲ್ಲಿ ಕರ್ನಾಟಕಕ್ಕೆ ಬಂದಂತೆ ಬಿಜೆಪಿ ಸರ್ಕಾರ ವರ್ತಿಸುತ್ತಿರುವುದು ಸಾಬೀತಾಗಿದೆ ಎಂದರು.
ಸುಳ್ಳು ದಾಖಲೆಗಳನ್ನು ನೀಡಿ ಅಪಾರ ಪ್ರಮಾಣದಲ್ಲಿ ಮನೆಗಳು ನೋಂದಣಿ ಮಾಡಿಸಿದರೆ ನಗರಾಡಳಿತಗಳು ಹೇಗೆ ಕಾರ್ಯನಿರ್ವಹಿಸಬೇಕು?ಇದರಿಂದ ಬೆಂಗಳೂರು ನಗರವಂತೂ ಕೊಂಪೆಯಾಗಲಿದೆ. ಬೆಂಗಳೂರಿಗರ ಬದುಕರನ್ನು ನರಕವಾಗಿಸುವ ಯತ್ನ ಇದಾಗಿದೆ ಎಂದು ದೂರಿದ್ದಾರೆ. |