ರಾಜ್ಯದ ವಿವಿಧ ಜೈಲುಗಳಲ್ಲಿ ಜೀವಾವಧಿ ಶಿಕ್ಷೆಗೊಳಪಟ್ಟು ಉತ್ತಮ ನಡತೆ ತೋರಿರುವ ಸುಮಾರು 350ರಿಂದ 375 ಕೈದಿಗಳನ್ನು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಬಂಧಿಖಾನೆ ಮತ್ತು ತೋಟಗಾರಿಕೆ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.ಉತ್ತಮ ನಡತೆ,ವ್ಯಕ್ತಿಯ ಹಿನ್ನೆಲೆ, ಆಕಸ್ಮಿಕ ಮತ್ತು ಆವೇಶಭರಿತರಾಗಿ ಅಪರಾಧ ಎಸಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವವರನ್ನು ಆಯ್ಕೆ ಮಾಡಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದರು.ಜೀವಾವಧಿ ಶಿಕ್ಷೆಗೆ ಒಳಗಾಗಿ 5ವರ್ಷ ಕಳೆದ ಮಹಿಳೆಯರು ಹಾಗೂ 7ವರ್ಷ ಜೈಲುವಾಸ ಅನುಭವಿಸಿದ ಪುರುಷರನ್ನು ಮತ್ತು 65ವರ್ಷ ಮೇಲ್ಪಟ್ಟ, ಮಾರಕ ರೋಗಗಳಿಗೆ ತುತ್ತಾದವರನ್ನು ಬಿಡಗಡೆ ಮಾಡಲು ತೀರ್ಮಾನಿಸಿದ್ದು, ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆಯಲಾಗುವುದು. ಆನಂತರ ರಾಜ್ಯಪಾಲರ ಅನುಮತಿಗಾಗಿ ಕಳುಹಿಸಿ ಕೊಡಲಾಗುವುದು ಎಂದರು. |