ಪ್ರಮೋದ್ ಮುತಾಲಿಕ್ ನೇತೃತ್ವದ ಹಿಂದೂ ರಾಷ್ಟ್ರೀಯ ರಕ್ಷಣಾ ಸೇನೆಯ ಯೋಜಿತ ಮೆರವಣಿಗೆಯನ್ನು ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯ ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಇದನ್ನು ಜಿಲ್ಲಾಡಳಿತ ತಡೆಯಿತು.
ಕಾನೂನು ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಸಂಘಟನೆಗಳ ಯಾವುದೇ ರೀತಿಯ ಮೆರವಣಿಗೆಗಳನ್ನು ನಿಷೇಧಿಸಬೇಕೆಂದು ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ, ಪ್ರಮೋದ್ ಮುತಾಲಿಕ್ ನೇತೃತ್ವದ ರಾಲಿಯನ್ನೂ ತಡೆಯಲಾಯಿತು ಎಂದು ಜಿಲ್ಲಾಧಿಕಾರಿ ಅಮರನಾರಾಯಣ ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದೆ ಕೋಮು ಸೌಹಾರ್ದ ವೇದಿಕೆ ಸಂಘಟಿಸಿದ್ದ ಮೆರವಣಿಗೆಯನ್ನೂ ಸಹ ಇದೇ ನೆಲೆಯಲ್ಲಿ ತಡೆಯಲಾಗಿತ್ತು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮಹಾತ್ಮಗಾಂಧಿ ವೃತ್ತದಿಂದ ಆರಂಭಿಸಿ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದತ್ತ ಸಾಗುತ್ತಿದ್ದ ಸೇನೆಯ ಸದಸ್ಯರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಶಾಂತಿಯುತವಾಗಿ ಮೆರವಣಿಗೆ ನಡೆಸುವುದಾಗಿ ಅಧಿಕಾರಿಗಳಿಗೆ ಘೋಷಣಾ ಪತ್ರ ನೀಡಿದ್ದರೂ ಸಹ ಜಿಲ್ಲಾಡಳಿತ ಮೆರವಣಿಗೆ ತಡೆಹಿಡಿದಿದೆ. ಎಂದು ಹಿಂದೂ ರಾಷ್ಟ್ರ ರಕ್ಷಣಾ ಸೇನೆಯ ಸದಸ್ಯ ಬಳ್ಳಾರಿ ರೇವಣ್ಣ ಟೀಕಿಸಿದ್ದಾರೆ.
|