ಸ್ವಾಮಿ ವಿವೇಕಾನಂದ ಅವರ ಜನ್ಮ ದಿನವನ್ನು ಆಚರಿಸುವುದರ ಹಿಂದೆ ಬಿಜೆಪಿಯ ಹಿಂದೂತ್ವದ ಅಜೆಂಡ ಅಡಗಿದೆ ಎಂದು ಜೆಡಿಎಸ್ ಗಂಭೀರವಾಗಿ ಆರೋಪಿಸಿದೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ವಕ್ತಾರ, ವೈಎಸ್‌ವಿ ದತ್ತ,ಜನ್ಮದಿನದ ಜಾಹೀರಾತಿನಲ್ಲಿ ಭಯೋತ್ಪಾದನೆ ಅಳಿಸಿ-ದೇಶ ಉಳಿಸಿ ಎಂದು ಪ್ರಕಟಿಸುವ ಮೂಲಕ ಬಿಜೆಪಿ ಸರ್ಕಾರ ವಿವೇಕಾನಂದರನ್ನು ಸಂಪೂರ್ಣ ಕೇಸರೀಕರಣ ಮಾಡಲು ಹೊರಟಿದೆ ಎಂದು ಟೀಕಿಸಿದರು.
ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಿವೇಕಾನಂದರ ಜನ್ಮದಿನ ಸರ್ಕಾರಿ ಖರ್ಚಿನಲ್ಲಿ ಮಾಡುವ ಮೂಲಕ ಎಳೆ ಮನಸ್ಸಿನ ವಿದ್ಯಾರ್ಥಿಗಳಲ್ಲಿ ಕೇಸರೀಕರಣದ ಮೂಲಭೂತವಾದದವನ್ನು ಬಿತ್ತಲು ಬಿಜೆಪಿ ಹೊರಟಿದೆ ಎಂದು ದೂರಿದರು. |