ಜನ ವಿರೋಧಿ ದಂಡಾವತಿ ಯೋಜನೆ ವಿರೋಧಿಸಿ ಸೊರಬದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ, ಆಡಳಿತಾರೂಢ ಸರ್ಕಾರ ಯಾವುದೇ ಕಾರಣಕ್ಕೂ ದಂಡಾವತಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಂಡಾವತಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮವಿದ್ದು, ಒಂದೆಡೆ ರೈತರು ಯಾವುದೇ ಕಾರಣಕ್ಕೂ ಶಂಕುಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರೆ, ಸರ್ಕಾರ ಕೂಡ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿಯೇ ಸಿದ್ದ ಎಂದು ಹೇಳಿದೆ.
ದಂಡಾವತಿ ಯೋಜನೆಯಲ್ಲಿ ಒಟ್ಟು ಆರು ಹಳ್ಳಿಗಳು ಮುಳುಗಲಿವೆ. ಈ ಯೋಜನೆಯಿಂದ ನೂರಾರು ಎಕರೆ ಪ್ರದೇಶ ನೀರಾವರಿ ಪ್ರದೇಶವಾಗಲಿದೆ. ಇದರ ಜೊತೆಗೆ ಈ ಯೋಜನೆಯಲ್ಲಿ ಜಮೀನು ಮತ್ತಿತರ ಆಸ್ತಿಪಾಸ್ತಿಗಳನ್ನು ಕಳೆದುಕೊಳ್ಳಲಿರುವ ಜನರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ ಎಂದು ತಿಳಿಸಿದೆ.
ದಂಡಾವತಿ ಯೋಜನೆ ಒಟ್ಟು 272 ಕೋಟಿ ರೂಪಾಯಿ ವೆಚ್ಚದ ಯೋಜನೆಯಾಗಿದೆ. ಇದರಿಂದ ಸಾಕಷ್ಟು ಪ್ರದೇಶಕ್ಕೆ ಅನುಕೂಲವಾಗಲಿದೆ. ಪ್ರತಿ ಯೋಜನೆಗಳಿಗೂ ವಿರೋಧ ಇದ್ದೇ ಇರುತ್ತದೆ. ಆದರೆ ಇದರಿಂದ ಮುಂದಿನ ದಿನಗಳಲ್ಲಿ ಲಾಭ ಆಗಲಿದೆ. ಆದರೆ ಇದರಿಂದ ಮುಂದಿನ ದಿನಗಳಲ್ಲಿ ಲಾಭವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಹಾರತಾಳು ಹಾಲಪ್ಪ ಹೇಳಿದ್ದಾರೆ. |