ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ಆನ್ ಲೈನ್ ಮೂಲಕ ದಂಡ ಪಾವತಿಸುವ ವಿನೂತನ ಯೋಜನೆಗೆ ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಚಾಲನೆ ನೀಡಿದ್ದಾರೆ.
ಮಲ್ಲೇಶ್ವರಂನ ಮಹಾರಾಣಿ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಬಿದರಿ, ನಗರದಲ್ಲಿ 35ಲಕ್ಷ ವಾಹಗಳಿದ್ದು, ಸಂಚಾರ ಒತ್ತಡ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಸಂಚಾರ ನಿಯಮ ಉಲ್ಲಂಘನೆಯಾಗುತ್ತದೆ. ಹಿಂದೆ ದಂಡ ಪಾವತಿಸಲು ಸವಾರರು ಕೋರ್ಟ್‌ಗೆ ಹೋಗಬೇಕಿತ್ತು. ಈ ಯೋಜನೆಯಿಂದ ಬೆಂಗಳೂರು ಆನ್ ಲೈನ್ ಕೇಂದ್ರದ ಮೂಲಕ ದಂಡಪಾವತಿಸಬಹುದಾಗಿದೆ.
ಸಂಚಾರ ನಿಯಮ ಉಲ್ಲಂಘನೆಯಲ್ಲಿ 2008ರ ಅವಧಿಯಲ್ಲಿ ಶೇ.20ರಷ್ಟು ಇಳಿಕೆಯಾಗಿದ್ದು, 2009ರಲ್ಲೂ ಶೇ.20ರಷ್ಟು ಇಳಿಕೆ ಮಾಡಲು ಪ್ರಯತ್ನಿಸಲಾಗುವುದು ಎಂದು ಬಿದರಿ ಹೇಳಿದರು. |