ನೈಸ್ ಯೋಜನೆಯಲ್ಲಿ 30ಸಾವಿರ ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ ಎಂದು ನ್ಯಾಯಾಧೀಶರಿಗೆ ಪತ್ರ ಬರೆದು ಹೈಕೋರ್ಟ್‌ನಿಂದ ನೋಟಿಸ್ ಪಡೆದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ತಕ್ಕ ಶಾಸ್ತಿ ಆಗಿದೆ ಎಂದು ಕಾರ್ಮಿಕ ಸಚಿವ ಬಚ್ಚೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಎಂಐಸಿ ಯೋಜನೆಯಲ್ಲಿ ಅವ್ಯವಹಾರಗಳು ನಡೆದಿದ್ದರೆ ದೇವೇಗೌಡರು ಅದನ್ನು ಸಾರ್ವಜನಿಕವಾಗಿಯೇ ಬಹಿರಂಗಪಡಿಸಬೇಕಿತ್ತು. ಅದನ್ನು ಬಿಟ್ಟು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ನ್ಯಾಯಧೀಶರಿಗೆ ಪತ್ರ ಬರೆದು ಹೈಕೋರ್ಟ್‌ನಿಂದ ತಕ್ಕ ತರಾಟೆ ಆಗಿದೆ ಎಂದರು.
ಯಾರಿಗಾದರೂ ಪತ್ರ ಬರೆದ ಕೂಡಲೇ ಸರ್ಕಾರವನ್ನು ಅಸ್ಥಿರಗೊಳಿಸಬಹುದು ಎಂದು ಅಪ್ಪ-ಮಕ್ಕಳ ಭ್ರಮೆಯಾಗಿತ್ತು. ಆದರೆ ಹೈಕೋರ್ಟ್ ದೇವೇಗೌಡರಿಗೆ ನೋಟಿಸ್ ನೀಡುವ ಮೂಲಕ ಬಾಲ ಸಿಕ್ಕಿ ಹಾಕಿಕೊಳ್ಳುವಂತೆ ಆಗಿದೆ ಎಂದು ಹೇಳಿದರು. |