ಜಾರಕಿಹೊಳಿ ಸಹೋದರರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಜಾರಕಿಹೊಳಿ ಅಭಿಮಾನಿಗಳು ಮಂಗಳವಾರ ಕರೆ ನೀಡಿದ್ದ ಗೋಕಾಕ್ ಬಂದ್ ಯಶಸ್ವಿಯಾಗಿದೆ.
ಸ್ಫೋಟ ಪ್ರಕರಣ ಸೇರಿದಂತೆ ಹಲವಾರು ಹತ್ಯಾ ಪ್ರಕರಣಗಳ ಪ್ರಮುಖ ಆರೋಪಿ ಇತ್ತೀಚೆಗೆ ಪೊಲೀಸರಿಗೆ ಸೆರೆಸಿಕ್ಕ ಸಂದರ್ಭದಲ್ಲಿ, ಜಾರಕಿಹೊಳಿ ಹತ್ಯೆ ಸಂಚು ವಿಷಯ ಕೂಡ ಬಯಲಾಗಿತ್ತು.
ಆ ನಿಟ್ಟಿನಲ್ಲಿ ಶಂಕಿತ ದುರ್ಷರ್ಮಿಗಳಿಗೆ ಕಠಿಣ ಶಿಕ್ಷೆ ಹಾಗೂ ಜಾರಕಿಹೊಳಿ ಸಹೋದರರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಜಾರಕಿಹೊಳಿ ಅಭಿಮಾನಿಗಳ ಒಕ್ಕೂಟ ಇಂದು ಗೋಕಾಕ್ ಬಂದ್‌ಗೆ ಕರೆ ನೀಡಿತ್ತು.
ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು, ಬೆಳಿಗ್ಗಿನಿಂದಲೇ ಅಂಗಡಿ-ಮುಂಗಟ್ಟುಗಳು ಬಂದ್ ಆಚರಿಸಿದ್ದು, ವಾಹನ ಸಂಚಾರವಿಲ್ಲದೇ ಜನರು ಪರದಾಡುವಂತಾಯಿತು. |