ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಮೇಲ್ಸೆತುವೆ ಹಾಗೂ ಅಂಡರ್‌ಪಾಸ್ ಕಾಮಗಾರಿಗಳನ್ನು ಲೋಕ್ಲಾಸ್ ಗುತ್ತಿಗೆದಾರರಿಗೆ ನೀಡಿದ್ದೇ ಕಾಮಗಾರಿಗಳ ಗುಣಮಟ್ಟವೇ ಹಾಳಾಗಿದೆ ಎಂದು ಸಾರಿಗೆ ಸಚಿವ ಆರ್.ಅಶೋಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗುತ್ತಿಗೆದಾರರು ಹಣ ಮಾಡುವ ದಂಧೆ ಮಾಡುತ್ತಿದ್ದು, ಇದರಿಂದ ಕಾಮಗಾರಿಗಳು ಹಾಳಾಗಿ ಹೋಗುತ್ತಿವೆ ಎಂದು ಗುತ್ತಿಗೆದಾರರ ವಿರುದ್ಧ ಅವರು ಹರಿಹಾಯ್ದಿದ್ದಾರೆ.
ಜೆ.ಪಿ.ನಗರ ಹಾಗೂ ಕದಿರೇನಹಳ್ಳಿ ಬಳಿ ಕೈಗೊಂಡಿರುವ ಅಂಡರ್‌ಪಾಸ್ ಕಾಮಗಾರಿಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಗುತ್ತಿಗೆದಾರರೆಲ್ಲಾ ಆಂಧ್ರ ಮೂಲದವರಾಗಿದ್ದು, ಅವರಿಗೆ ದುಡ್ಡು ಮಾಡುವ ದಂಧೆಯನ್ನು ಬಿಟ್ಟರೆ ರಾಜ್ಯದ ಬಗ್ಗೆ ಯಾವುದೇ ಒಳ್ಳೆಯ ಭಾವನೆಗಳಿಲ್ಲ ಇಂತಹ ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸುವುದು ಅಗತ್ಯವಾಗಿದೆ ಎಂದರು. |