ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬುಸುಗುಟ್ಟಿದ ನಾಗತಿಹಳ್ಳಿ ಚಂದ್ರಶೇಖರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬುಸುಗುಟ್ಟಿದ ನಾಗತಿಹಳ್ಳಿ ಚಂದ್ರಶೇಖರ್
NRB
ರಾಜ್ಯ ಸರ್ಕಾರ ಹೊಸ ಸಮಿತಿ ರಚಿಸಿ ಪ್ರಶಸ್ತಿಗಳನ್ನು ಪುನರ್ ಪರೀಶೀಲಿಸದಿದ್ದರೆ ತಮ್ಮ ಚಿತ್ರಕ್ಕೆ ಬಂದಿರುವ ಪ್ರಶಸ್ತಿಯನ್ನು ನಿರಾಕರಿಸುವುದಾಗಿ 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

2007-08ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯ ತೀರ್ಪು ಪೂರ್ವಾಗ್ರಹ, ಸ್ವಜನ ಪಕ್ಷಪಾತ ಹಾಗೂ ಬೇಜವಾಬ್ದಾರಿ ನಡವಳಿಕೆಯಿಂದ ಕೂಡಿದೆ ಎಂದು ಆರೋಪಿಸಿದರು. ಮಕ್ಕಳ ವ್ಯಾಪ್ತಿಯಲ್ಲಿದ್ದ 'ಮೊಗ್ಗಿನ ಜಡೆ' ಅತ್ಯುತ್ತಮ ದ್ವಿತೀಯ ಸ್ಥಾನಕ್ಕೆ ಬಂದ ಮರ್ಮವೇನು ಎಂದು ಪ್ರಶ್ನಿಸಿದ ಅವರು ಇದಕ್ಕೆ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ನಿರ್ದೇಶಕ ರಾಂದಾಸ್ ನಾಯ್ಡು ಹಾಗೂ ಆಯ್ಕೆ ಸಮಿತಿಯಲ್ಲಿದ್ದ ಅಶೋಕ್ ನಾಯ್ಡು ನಡುವಿನ ಸಂಬಂಧ, ಜಾತಿ ಪ್ರೇಮ ಕಾರಣವಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿದರು.

ಆಯ್ಕೆ ಸಮಿತಿಯಲ್ಲಿದ್ದ ಮೂವರು ಸದಸ್ಯರು ರಾಜೀನಾಮೆ ನೀಡಿದರೂ ಅವರ ಸ್ಥಾನಕ್ಕೆ ಅರ್ಹರನ್ನು ಪುನರಾಯ್ಕೆ ಮಾಡದೆ ಪ್ರಶಸ್ತಿ ಆಯ್ಕೆ ನಡೆದಿದೆ. ಇದು ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್ ಅವರ ಬೇಜವಾಬ್ದಾರಿತನ. ಆದ್ದರಿಂದ ಎಲ್ಲಾ ಸದಸ್ಯರನ್ನೂ ಒಳಗೊಂಡ ಆಯ್ಕೆ ಸಮಿತಿ ಪ್ರಶಸ್ತಿಗಳ ಪುನರ್ ಪರೀಶೀಲನೆ ಮಾಡಬೇಕು ಎಂದವರು ಒತ್ತಾಯಿಸಿದ್ದಾರೆ.

ಕೇವಲ ಒಂದೇ ಗುಂಪಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಹೀಗೆ ಮಾಡುವುದಾದರೆ ವಾಣಿಜ್ಯ ಚಿತ್ರಗಳ ನಿರ್ಮಾಣ ಯಾಕಾಗಿ ಮಾಡಬೇಕು ಎಂದು ಪ್ರಶ್ನಿಸಿದರು. ಕೇಸರಿ ಹರವು ಅವರಿಗೆ ಚಲನಚಿತ್ರ ಆಯ್ಕೆ ಸಮಿತಿ ಅಧ್ಯಕ್ಷರಾಗುವ ಅರ್ಹತೆ ಏನಿದೆ? ಹಲವಾರು ವರ್ಷಗಳ ಹಿಂದೆ ಒಂದೇ ಒಂದು ಚಿತ್ರ ನಿರ್ದೇಶಿಸಿ ಸಿನಿಮಾ ಮಾಧ್ಯಮದ ಜತೆ ಯಾವುದೇ ಸಂಪರ್ಕವಿಟ್ಟುಕೊಳ್ಳದ ಅವರನ್ನು ಅಧ್ಯಕ್ಷರನ್ನಾಗಿಸಿದ್ದು ಹೇಗೆ ಎಂದು ಕಿಡಿಕಾರಿದರು.

ಚಿತ್ರದ ನಿರ್ಮಾಪಕ ಕೆ.ಮಂಜು, ಪ್ರಶಸ್ತಿ ಪ್ರಕಟವಾಗುವ ಹಿಂದಿನ ದಿನ ಮಾತಾಡ್ ಮಾತಾಡ್ ಮಲ್ಲಿಗೆ ಹಾಗೂ ಗುಲಾಬಿ ಟಾಕೀಸ್ ನಡುವೆ ಪೈಪೋಟಿ ಇದೆ ಎಂದಿತ್ತು. ಆದರೆ ಈ ಎರಡು ಚಿತ್ರಗಳ ನಡುವೆ ಮೊಗ್ಗಿನ ಜಡೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿಯಿಂದ ಪರ್ಯಾಯ
ರಾಜ್ಯದಲ್ಲಿ ಎನ್‌ಟಿಪಿಸಿ ಘಟಕ
ವಿರೋಧದ ನಡುವೆ 'ದಂಡಾವತಿ' ಯೋಜನೆಗೆ ಚಾಲನೆ
ಕಳಪೆ ಕಾಮಗಾರಿ ಬಗ್ಗೆ ಸಚಿವ ಅಶೋಕ್ ಆಕ್ರೋಶ
ಹಲ್ಲೆ: ಡಿ.ಸಿ.ತಮ್ಮಣ್ಣ ಜಾಮೀನು ಅರ್ಜಿ ವಜಾ
ಜಾರಕಿಹೊಳಿ ಸಹೋದರರಿಗೆ ರಕ್ಷಣೆ: ಗೋಕಾಕ್ ಬಂದ್ ಯಶಸ್ವಿ