ರಾಜ್ಯ ಸರ್ಕಾರಿ ನೌಕರರಿಗೆ ಈ ಸುದ್ದಿ ಸ್ವಲ್ಪ ಬೇಸರ ತರಬಹುದು. ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಸಾಕಷ್ಟು ಹಣವಿಲ್ಲದೇ ಇರುವುದರಿಂದ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ತಡೆ ಹಿಡಿಯಲಾಗಿದೆ. ಅಲ್ಲದೇ ಗ್ರೂಪ್ ಡಿ ನೌಕರರಿಗೆ ಮತ್ತು ಚಾಲಕರಿಗೆ ನೀಡುವ 200 ರೂ. ಸಮವಸ್ತ್ರ ಭತ್ಯೆ ಸೌಕರ್ಯವನ್ನೂ ಹಿಂಪಡೆದಿದೆ.
ನೌಕರರ ವೇತನಕ್ಕಾಗಿ ಸರ್ಕಾರ ಮಾಡುವ ವೆಚ್ಚ ವರ್ಷಕ್ಕೆ 6 ಸಾವಿರ ಕೋಟಿ ರೂ. ಎನ್ನಲಾಗಿದೆ. ಗಳಿಕೆ ರಜೆ ನಗದೀಕರಣ ತಡೆ ಹಿಡಿದರೆ 600 ಕೋಟಿ ರೂ. ಉಳಿತಾಯ ಮಾಡಬಹುದಾಗಿದೆ.
ಹಿರಿಯ ಐಎಎಸ್ ಅಧಿಕಾರಿಗಳಿಂದ ಹಿಡಿದಿ ಗ್ರೂಪ್ ಡಿ ನೌಕರರವರೆಗೆ ರಾಜ್ಯ ಸರ್ಕಾರಿ ನೌಕರರು ಪ್ರತಿ ಎರಡು ವರ್ಷಕ್ಕೊಮ್ಮೆ ರಜೆ ನಗದೀಕರಣ ಸೌಲಭ್ಯ ಪಡೆಯುವ ಅವಕಾಶವಿದ್ದು ಒಂದು ತಿಂಗಳ ಸಂಬಳ ಪಡೆಯಬಹುದಾಗಿದೆ.
ಆರ್ಥಿಕ ಹಿಂಜರಿಕೆ ಸರ್ಕಾರದ ಹಣಕಾಸು ಸ್ಥಿತಿಯ ಮೇಲೆ ಪರಿಣಾಮ ಬೀರಿ ರುವುದನ್ನು ಒಪ್ಪಿಕೊಂಡಿರುವ ಹಣಕಾಸು ಇಲಾಖೆಯ ಅಧಿಕಾರಿಗಳು, ಪರಿಸ್ಥಿತಿಯ ಅಗತ್ಯಕ್ಕೆ ತಕ್ಕಂತೆ ಈ ನಿರ್ದೇಶನ ಹೊರಡಿಸಿದ್ದಾರೆ. |