ಜೆಡಿಎಸ್ ನೂತನ ಪದಾಧಿಕಾರಿಗಳ ಪಟ್ಟಿ ಬಹುತೇಕ ಪೂರ್ಣಗೊಂಡಿದ್ದು, ನೂತನ ಕಾರ್ಯಾಧ್ಯಕ್ಷರಾಗಿ ಇಕ್ಬಾಲ್ ಅನ್ಸಾರಿ, ಯುವ ಜನತಾದಳಕ್ಕೆ ಸುನೀಲ್ ಹೆಗ್ಡೆ ಮತ್ತು ಮಲ್ಲಿಕಾರ್ಜುನ ಖೂಬಾ ಅವರು ಕ್ರಮವಾಗಿ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಉತ್ತರ ಕರ್ನಾಟಕ ಭಾಗಕ್ಕೇ ವಕ್ತಾರ ಹುದ್ದೆಯನ್ನು ಸೃಷ್ಟಿ ಮಾಡಿರುವುದು ಈ ಬಾರಿಯ ಪದಾಧಿಕಾರಿಗಳ ಪಟ್ಟಿಯ ವಿಶೇಷ. ಈ ಹುದ್ದೆ ಪ್ರಮೋದ್ ಹೆಗ್ಡೆ ಅವರಿಗೆ ಲಭಿಸಿದೆ. ವೈ.ಎಸ್.ವಿ.ದತ್ತ ಪಕ್ಷದ ವಕ್ತಾರರಾಗಿ ಮುಂದುವರಿಯಲಿದ್ದು, ಪಿ.ಸಿ.ಸಿದ್ಧನಗೌಡ ಅವರು ಮಹಾ ಪ್ರಧಾನ ಕಾರ್ಯದರ್ಶಿ ಮತ್ತು ರಮೇಶ್ ಬಾಬು ಅವರು ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲೇ ಮುಂದುವರಿಯಲಿದ್ದಾರೆ.
ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಹಿರಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರೆ, ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಪ್ರಧಾನ ಕಾರ್ಯದರ್ಶಿ, ಎಚ್.ಸಿ.ನೀರಾವರಿ ಅವರನ್ನು ಶಿಸ್ತು ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. |