ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಂಡು ವಂಚನೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.
ಬಸವೇಶ್ವರ ನಗರ ನಿವಾಸಿ ರಾಮಕೃಷ್ಣ ಎಂಬವರು ಬಂಧಿತ ವ್ಯಕ್ತಿಯಾಗಿದ್ದಾರೆ. ಈತ ಬಿಜೆಪಿಯ ಹಿಂದುಳಿದ ವರ್ಗದ ಒಕ್ಕೂಟಗಳ ಪ್ರಧಾನ ಕಾರ್ಯದರ್ಶಿ ಹಾಗೂ ಎಕ್ಸೈಜ್ ಮೇಲ್ ಮಾಸ ಮಾಸ ಪತ್ರಿಕೆ ಸಂಪಾದಕ ಮತ್ತು ಬಸವೇಶ್ವರ ನಗರ ನಾಗರಿಕ ಹಿತರಕ್ಷಣಾ ವೇದಿಕೆ ಗೌರವಾಧ್ಯಕ್ಷ ಎಂದು ವಂಚಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ಬಳಿ ಬರುವ ವ್ಯಕ್ತಿಗಳಿಗೆ ಲೆಟರ್ ಹೆಡ್ ಬಳಸಿ ಸಚಿವರು ಹಾಗೂ ಶಾಸಕರುಗಳಿಗೆ ಶಿಫಾರಸು ಪತ್ರ ನೀಡುತ್ತಿದ್ದ ರಾಮಕೃಷ್ಣ ಸರ್ಕಾರಿ ಹುದ್ದೆ ಸೇರಿದಂತೆ ವಿವಿಧ ಯೋಜನೆಗಳ ನೆರವು ನೀಡುವಂತೆ ಶಿಫಾರಸು ಮಾಡುತ್ತಿದ್ದ.
ವಂಚಕನ ಬಗ್ಗೆ ಪೂರ್ಣ ಮಾಹಿತಿ ಕಲೆ ಹಾಕಿದ ಸಿಪಿಐ ಪರಮೇಶ್ವರಪ್ಪ ಮತ್ತು ಪಿಎಸ್‌ಐ ಆರ್.ಹೇಮಂತ್ ಕುಮಾರ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. |