ಸಿಂಡಿಕೇಟ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಕೆ.(ಕಲ್ಸಂಕ ಕಮಲಾಕ್ಷ) ಪೈ ಅವರು ಬುಧವಾರ ಮಧ್ನಾಹ್ನ ದೈವಾಧೀನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇತ್ತೀಚೆಗೆ ತೀವ್ರ ಅನಾರೋಗ್ಯ ಬಳಲುತ್ತಿದ್ದು,ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ರಿಜಿಸ್ಟ್ರಾರ್ ಆಗಿದ್ದ ಕೆ.ಕೆ.ಪೈ ಅವರು ಬ್ಯಾಂಕಿಂಗ್, ಕೃಷಿ, ಹೈನುಗಾರಿಕೆ ಕಲೆ, ಸಾಹಿತ್ಯ, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳಲ್ಲಿ ದುಡಿದ ಅವರು,ನಿರರ್ಗಳ ಮಾತಿಗೂ ಹೆಸರಾಗಿದ್ದರು.
ಪೈ ಅವರು ಇಬ್ಬರು ಪುತ್ರರು,ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. |