ನೈಸ್ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಆಗ್ರಹಿಸಿದೆ.
ದೇವೇಗೌಡರ ವಿರುದ್ಧ ನ್ಯಾಯಾಂಗ ಮತ್ತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಬಿಜೆಪಿ ರಾಜ್ಯ ವಕ್ತಾರ ಹಾಗೂ ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್, ಬಿಜೆಪಿ ಸರ್ಕಾರ ಆರ್ಎಸ್ಎಸ್ ರಹಸ್ಯ ಕಾರ್ಯಸೂಚಿಯನ್ನು ಜಾರಿಗೊಳಿಸುತ್ತಿದೆ ಎನ್ನುವ ಜೆಡಿಎಸ್ ನಾಯಕರ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದರು.
ತುರ್ತು ಪರಿಸ್ಥಿತಿಯ ನೆನಪಿನ ಆಚರಣೆ ಸಂದರ್ಭವೊಂದರಲ್ಲಿ ದೇವೇಗೌಡ ಅವರು ಆರ್ಎಸ್ಎಸ್ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು. ಆರ್ಎಸ್ಎಸ್ ಸಂಘಟನೆ ಅಂದು ಇರದಿದ್ದರೆ ಪ್ರಜಾಪ್ರಭುತ್ವ ಇರುತ್ತಿರಲಿಲ್ಲ ಎಂದಿದ್ದರು. ಅದೇ ಪಕ್ಷದವರು ಈಗ ಆರ್ಎಸ್ಎಸ್ ಅನ್ನು ಹೀಗಳೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ 20 ತಿಂಗಳಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಸಾಧನೆಯ ವಿವರವನ್ನೂ ಕೂಡಾ ಜನರ ಮುಂದಿಡಲಾಗಿದೆ. ಉಪ ಚುನಾವಣೆ ನಂತರ ಸರ್ಕಾರ ದೃಢವಾಗಿದ್ದು ಅಭಿವೃದ್ದಿ ಕಾರ್ಯಗಳತ್ತ ಕ್ರಿಯಾಶೀಲ ಹೆಜ್ಜೆಯಿಟ್ಟಿದ್ದೆ ಎಂದರು.
|