ಈ ತಿಂಗಳಾಂತ್ಯದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನೂತನ ರಾಜಕೀಯ ಪಕ್ಷ ಉದಯವಾಗಲಿದೆ ಎಂದು ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷ ವರ್ತೂರು ಪ್ರಕಾಶ್ ಹೇಳುವ ಮೂಲಕ ಸಿದ್ದು ವಿಷಯಕ್ಕೆ ಮತ್ತೆ ರೆಕ್ಕೆಪುಕ್ಕ ಬರಿಸಿದ್ದಾರೆ.
"ಹೊಸ ಪಕ್ಷ ಕಟ್ಟುವ ಕಾಲ ಸನ್ನಿಹಿತವಾಗಿದೆ. ಮಕರ ಸಂಕ್ರಾಂತಿಯ ಅನಂತರ ರಾಜ್ಯ ರಾಜಕೀಯದಲ್ಲಿ ಧ್ರುವೀಕರಣ ಪ್ರಾರಂಭವಾಗಲಿದೆ ಎಂದರು. ಕೊಪ್ಪಳದಲ್ಲಿ ಜೆಡಿಎಸ್ ನಡೆಸಲಿರುವ ಸಮಾವೇಶದಿಂದ ಅಹಿಂದ ನಾಯಕರಿಗೆ ಹೊಟ್ಟೆ ನೋವು ಬರುವುದಿಲ್ಲ. ಯಾರು ಶೊಷಿತರ ಪರವಾಗಿದ್ದಾರೆ ಎಂಬುದು ನಾಡಿನ ಜನತೆಗೆ ಗೊತ್ತಿದೆ. ದೇವೇಗೌಡರು ಶೋಷಿತ ವರ್ಗಗಳ ನಾಯಕರನ್ನು ರಾಜಕೀಯವಾಗಿ ಮುಗಿಸಿರುವ ಇತಿಹಾಸವಿದೆ" ಎಂದರು.
"ದೇವೇಗೌಡರು ಒಳಮೀಸಲಾತಿ ಜಾರಿಗೊಳಿಸುವುದಾಗಿ ಈ ಮೊದಲು ಘೋಷಿಸಿದ್ದರು. ಆದರೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದರೂ ಏಕೆ ಇದನ್ನು ಜಾರಿಗೊಳಿಸಲಿಲ್ಲ. ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ಜೆಡಿಎಸ್ ಮುಖಂಡರು ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ನಿಧನ ನಂತರ ರಾಜ್ಯಾಧ್ಯಕ್ಷ ಸ್ಥಾನವನ್ನು ರಾಜ್ಯಾಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡದೇ ಕುಮಾರಸ್ವಾಮಿಯವರಿಗೆ ಯಾಕೆ ನೀಡಿದರು" ಎಂದು ವರ್ತೂರು ಪ್ರಶ್ನಿಸಿದರು.
|