ಫೆಬ್ರವರಿ ಮೊದಲ ವಾರದಲ್ಲಿ ರಾಜ್ಯ ಸಮಾಜವಾದಿ ಪಕ್ಷವನ್ನು ಕಾಂಗ್ರೆಸ್ ಜತೆ ವೀಲೀನಗೊಳಿಸಲಾಗುವುದು ಎಂದು ಸಂಸದ ಎಸ್.ಬಂಗಾರಪ್ಪ ಹೇಳಿದರು. ಐದನೆ ಬಾರಿ ಶಿವಮೊಗ್ಗ ಲೋಕಸಭೆ ಸ್ಥಾನಕ್ಕೆ ಸ್ಪರ್ಧಿಸಲಿದ್ದೇನೆ ಎಂದು ನುಡಿದ ಅವರು, ಈ ಬಾರಿ ಕೇಂದ್ರ ಸರ್ಕಾರದ ಸಚಿವನಾಗಲಿದ್ದೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ತಮಗೆ ಟಿಕೆಟ್ ನೀಡುವುದು ಅಥವಾ ನಿರಾಕರಿಸುವುದು ಹೈಕಮಾಂಡ್ಗೆ ಬಿಟ್ಟ ವಿಷಯ.ಈಗಾಗಲೇ ರಾಜ್ಯದ ಮುಖಂಡರು ಮತ್ತು ಜಿಲ್ಲೆಯ ಜನತೆ ಕಾಂಗ್ರೆಸ್ನಿಂದ ತಮ್ಮನ್ನೇ ಲೋಕಸಭೆ ಅಭ್ಯರ್ಥಿ ಎಂದು ನಿರ್ಧರಿಸಿದ್ದಾರೆ ಎಂದರು.
ಕಾಂಗ್ರೆಸ್ ಜತೆ ವೀಲೀನಕ್ಕೆ ಎಸ್ಪಿ ರಾಷ್ಟ್ರೀಯ ಅಧ್ಯಕ್ಷರೂ ಒಪ್ಪಿಗೆ ನೀಡಿದ್ದಾರೆ. ದೇಶದಲ್ಲಿ ಬಹುಮತ ತರುವ ನಾಯಕತ್ವದ ಕೊರತೆ ಎಲ್ಲ ಪಕ್ಷದಲ್ಲಿಯೂ ಕಂಡು ಬರುತ್ತಿರುವುದರಿಂದ ರಾಜಕೀಯ ಒತ್ತಡಗಳು ಇಂತಹ ಬದಲಾವಣೆಗಳಿಗೆ ಕಾರಣವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
|