ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಪಕ್ಷ ರಚಿಸುವ ಗಾಳಿಸುದ್ದಿ ರಾಜ್ಯರಾಜಕಾರಣದ ಪಡಸಾಲೆಯಲ್ಲಿ ಹರಿದಾಡುತ್ತಿದ್ದು, ಇತ್ತ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ನೂನತ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ.
ನೂತನ ಪಕ್ಷ ರಚನೆ ಅವೆಲ್ಲ ಸುಳ್ಳು ಸುದ್ದಿ, ಕಾಂಗ್ರೆಸ್‌ನಲ್ಲಿಯೇ ಗಟ್ಟಿಯಾಗಿ ತಳವೂರುವುದಾಗಿ ಸಿದ್ದರಾಮಯ್ಯನವರು ಎಷ್ಟೇ ಸಬೂಬು ನೀಡಿದರು ಕೂಡ, ಅವರ ಆಪ್ತ ವಲಯ ಮಾತ್ರ ಬಿರುಸಿನ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ. ಅಲ್ಲದೇ ಸಿದ್ದರಾಮಯ್ಯನವರು ಕೂಡ ಅಳೆದು-ತೂಗಿ ಲೆಕ್ಕಚಾರ ಹಾಕತೊಡಗಿದ್ದಾರೆ.
ಗುರುವಾರ ನಡೆದ ಬಿಜೆಪಿಯ ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಮಾತುಕತೆ ನಡೆದಿದ್ದು, ಹೇಗಾದರೂ ಮಾಡಿ ಸಿದ್ದರಾಮಯ್ಯ ಅವರೊಂದಿಗೆ ಮೈತ್ರಿ ಮಾಡಿಕೊಂಡರೆ ಪಕ್ಷಕ್ಕೆ ಹೆಚ್ಚಿನ ಲಾಭವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ.
ಆ ನಿಟ್ಟಿನಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಿದ್ದು ಅವರು ನೂತನ ಪಕ್ಷ ಸ್ಥಾಪಿಸಿ ಮೈತ್ರಿಗೆ ಮುಂದಾದರೆ 5ರಿಂದ 8ಸ್ಥಾನಗಳನ್ನು ಬಿಟ್ಟುಕೊಡಲು ಬಿಜೆಪಿ ಒಲವು ತೋರಿಸಿದೆ. |