ನಗರವನ್ನು ತಲ್ಲಣಗೊಳಿಸಿದ ಜಯನಗರದ ವೃದ್ಧ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ಜಯನಗರದ 11ನೇ ಮುಖ್ಯರಸ್ತೆಯ ಸಮೀಪದ ನಿವಾಸದಲ್ಲಿ ವೃದ್ಧ ದಂಪತಿಗಳಾದ ಎ.ಎಸ್. ವೆಂಕಟ ರಂಗನ್ (79) ಹಾಗೂ ವಸಂತಾ (72) ಅವರ ಕತ್ತು ಸೀಳಿ ಕೊಲೆ ಮಾಡಲಾಗಿತ್ತು.
ದಂಪತಿ ಮನೆ ಹತ್ತಿರದಲ್ಲಿಯೇ ಇದ್ದ ಆಭರಣ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾದ ಚಿತ್ರಣದಿಂದಾಗಿ ಮಹತ್ವದ ಸುಳಿವು ಲಭಿಸಿದ್ದು, ಆರೋಪಿಗಳಲ್ಲಿ ಓರ್ವನನ್ನು ಬಂಧಿಸಲು ಇದು ಸಹಕಾರಿಯಾಯಿತು ಎಂದು ಮೂಲಗಳು ತಿಳಿಸಿವೆ. ಬಂಧಿತ ಆರೋಪಿಯು ಹೆಲ್ತ್ ಕ್ಲಬ್ ಒಂದರ ಮಾಲೀಕ ಅಥವಾ ಸಿಬ್ಬಂದಿ ಆಗಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.
ಜಯನಗರದ ಮೂರನೇ ಬ್ಲಾಕ್‌ನಲ್ಲಿರುವ ಅಂದಾಜು 8 ಕೋಟಿ ರೂ. ಆಸ್ತಿ ವಿಷಯವೇ ದಂತಿಗಳ ಜೀವಕ್ಕೆ ಮುಳುವಾಗಿತ್ತು.
|