ಇಲ್ಲಿನ ಕಮಠಾಣ ಅರಣ್ಯ ಪ್ರದೇಶದ ಸಮೀಪ ತರಬೇತಿ ವಿಮಾನ 'ಸೂರ್ಯಕಿರಣ' ಅಪಘಾತಕ್ಕೀಡಾದ ಪರಿಣಾಮ ಓರ್ವ ಪೈಲಟ್ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ವಾಯುಪಡೆ ತರಬೇತಿ ಕೇಂದ್ರದ ಹೊರವಲಯದಲ್ಲಿ ಇಂದು ಬೆಳಿಗ್ಗೆ ತರಬೇತು ನಿರತವಾಗಿದ್ದ ಸಂದರ್ಭದಲ್ಲಿ ಮತ್ತೊಂದು ವಿಮಾನದ ರೆಕ್ಕೆ ಒಂದಕ್ಕೊಂದು ಬಡಿದ ಪರಿಣಾಮ ವಿಮಾನ ಬೆಂಕಿ ಹೊತ್ತಿಕೊಂಡು ಧರೆಗುರುಳಿತ್ತು. ಘಟನೆಯಲ್ಲಿ ಪೈಲಟ್ ವಿಂಗ್ ಕಮಾಂಡರ್ ಆರ್.ಎಸ್. ದಲಿವಾಲ್ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಸ್ಥಳಕ್ಕೆ ವಾಯುಪಡೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದಾಗಿ ವಿವರಿಸಿದ್ದಾರೆ. |