ವಿಧಾನಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಜಾತ್ಯತೀತ ಜನತಾದಳದ ಪುಟ್ಟಣ್ಣ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಸಭಾಪತಿ ಮತ್ತಿಕಟ್ಟಿ ಘೋಷಿಸಿದ್ದಾರೆ. ಈ ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಒಪ್ಪಂದಂತೆ, ಸಭಾಪತಿ ಸ್ಥಾನ ಕಾಂಗ್ರೆಸ್ ಪಾಲಾಗಿದ್ದು, ಉಪಸಭಾಪತಿ ಸ್ಥಾನ ಜೆಡಿಎಸ್‌ಗೆ ಬಿಟ್ಟುಕೊಡುವುದಾಗಿ ಹೇಳಿತ್ತು. ಅದರನ್ವಯ ಮಂಗಳವಾರ ಜೆಡಿಎಸ್ ಉಪಸಭಾಪತಿ ಸ್ಥಾನಕ್ಕೆ ಪುಟ್ಟಣ್ಣ ಅವರನ್ನು ಕಣಕ್ಕಿಳಿಸಿತ್ತು.ನಿನ್ನೆ ಅವರು ನಾಮಪತ್ರವನ್ನೂ ಕೂಡ ಸಲ್ಲಿಸಿದ್ದರು, ಬೇರೆ ಯಾವುದೇ ಪಕ್ಷದಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದ ಕಾರಣದಿಂದಾಗಿ ಪುಟ್ಟಣ್ಣ ಅವರ ಜಯದ ಹಾದಿ ಸುಗಮವಾಗಿತ್ತು. |