ಮರಾಠಿಗರ ಮತ್ತು ಕನ್ನಡಿಗರ ನಡುವೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಪರ-ವಿರೋಧಗಳ ಪ್ರತಿಭಟನೆಗಳು ಮತ್ತೆ ಮುಂದುವರಿದಿದ್ದು, ಇದೀಗ ಹಿಂಸಾರೂಪ ತಾಳಿದೆ.
ರಾಜ್ಯದಲ್ಲೂ ಕನ್ನಡಿಗರು ಬಸ್ಗೆ ಬೆಂಕಿ ಹಚ್ಚುವ, ಠಾಕ್ರೆ ಪ್ರತಿಕೃತಿ ಸುಡುವ, ಮರಾಠಿ ಪತ್ರಿಕೆಗಳಿಗೆ ಬೆಂಕಿಯಿಡುವ, ಮಹಾರಾಷ್ಟ್ರ ಮೂಲದ ಬ್ಯಾಂಕ್‌ನ ಪೀಠೋಪಕರಣಗಳನ್ನು ಸಂಪೂರ್ಣವಾಗಿ ಪುಡಿಗೈದಿದ್ದಾರೆ. ಅಲ್ಲದೇ ಮರಾಠ ಮಂಡಳ ಕಟ್ಟಡಕ್ಕೆ ಕಲ್ಲು ತೂರುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರಾಠಿಗರೂ ಪ್ರತಿಭಟನೆ ಮುಂದುವರಿಸಿದ್ದಾರೆ. ಕೊಲ್ಲಾಪುರದಲ್ಲಿ ಕರ್ನಾಟಕಕ್ಕೆ ಸೇರಿದ 2 ಬಸ್‌ಗಳಿಗೆ ಕಲ್ಲು ತೂರಿದ್ದಾರೆ. ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿದ್ದರೆ, ಇತ್ತ ಕನ್ನಡಿಗರ ಆಕ್ರೋಶಕ್ಕೆ ಎಂಇಎಸ್ ತನ್ನ ವರಸೆ ಬದಲಿಸಿದೆ. ಲಾತೂರು ಬಸ್ ಬೆಂಕಿ ಪ್ರಕರಣಕ್ಕೆ ತನ್ನ ಬೆಂಬಲವಿಲ್ಲ ಎಂದು ಘೋಷಿಸಿದೆ.
ಮರಾಠಿಗರ ದಾಂದಲೆಗೆ ಪ್ರತಿಕಾರವಾಗಿ ಅಥಣಿಯಲ್ಲಿ ಮಹಾರಾಷ್ಟ್ರ ಬಸ್ಸೊಂದಕ್ಕೆ ಬೆಂಕಿ ಹಚ್ಚಲಾಗಿದೆ. ಧಾರಾವಾಡದಲ್ಲಿ ಮಹಾರಾಷ್ಟ್ರ ಬ್ಯಾಂಕ್‌ಗೆ ನುಗ್ಗಿದ ಪ್ರತಿಭಟನಾಕಾರರು ಕಂಪ್ಯೂಟರ್, ಕಿಟಕಿಗಳನ್ನು ನಾಶಗೊಳಿಸಿದ್ದಾರೆ. |