ಉತ್ತರಪ್ರದೇಶ, ಬಿಹಾರಿಗಳ ಕುರಿತು ಬಾಯಿಗೆ ಬಂದಂತೆ ಮಾತನಾಡಿ ಮಹಾರಾಷ್ಟ್ರದಲ್ಲಿ ಸಾಮರಸ್ಯಕ್ಕೆ ಕಿಚ್ಚನ್ನಿಟ್ಟ ಶಿವಸೇನೆ, ಎಂಇಎಸ್ ಇದೀಗ ಬಾಯಿಗೆ ಬಂದ ಹೇಳಿಕೆ ನೀಡತೊಡಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಒಬ್ಬ ಹುಚ್ಚ ಎಂಬುದಾಗಿ ಶಿವಸೇನೆಯ ಉದ್ದವ್ ಠಾಕ್ರೆ ಜರೆದಿದ್ದಾರೆ.
ನಾಂದೇಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ಹುಚ್ಚರಂತೆ ವರ್ತಿಸುತ್ತಿದ್ದಾರೆ. ಅದಕ್ಕಾಗಿ ಬಿಜೆಪಿ ಹೈಕಮಾಂಡ್ ಕರ್ನಾಟಕದ ಸರ್ಕಾರಕ್ಕೆ ಬುದ್ದಿ ಹೇಳಬೇಕು ಎಂದು ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ವಿಶೇಷ ಅಧಿವೇಶನಕ್ಕೆ ಪ್ರತಿಯಾಗಿ, ಮಹಾಮೇಳಾವ್ ಮಾಡಲು ಅವಕಾಶ ನೀಡಬೇಕೆಂದು ಎಂಇಎಸ್ ಪಟ್ಟು ಹಿಡಿದಿತ್ತಾದರೂ, ಅದಕ್ಕೆ ಜಿಲ್ಲಾಡಳಿತ ಅವಕಾಶ ನೀಡಿಲ್ಲವಾಗಿತ್ತು. ಆದರೂ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮಹಾರಾಷ್ಟ್ರದ ಪ್ರತಿಪಕ್ಷದ ರಾಮದಾಸ್ ಕದಂ ಆಗಮಿಸಿದ್ದ ಸಂದರ್ಭದಲ್ಲಿ, ಮರಾಠಿಗರ ಮೇಲೆ ಕನ್ನಡಿಗರು ಹಲ್ಲೆ ಮಾಡುವುದಾಗಲಿ, ಭಗವಾಧ್ವಜ ಇಳಿಸುವ ಕೆಲಸಕ್ಕೆ ಮುಂದಾದಲ್ಲಿ ಕೈ ಕತ್ತರಿಸುವುದಾಗಿ ಉದ್ದಟತನದ ಹೇಳಿಕೆ ನೀಡಿದ್ದರು.
ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗೆ ಬೆಂಕಿ ಹಚ್ಚಲಾಯಿತು, ಅದಕ್ಕೆ ಪ್ರತಿಯಾಗಿ ಮಹಾರಾಷ್ಟ್ರ ಬ್ಯಾಂಕ್, ಮಹಾರಾಷ್ಟ್ರದ ವಾಹನಗಳಿಗೆ ಕನ್ನಡಿಗರು ಬೆಂಕಿ ಹಚ್ಚುವ ಮೂಲಕ ಪ್ರತಿಕಾರ ತಿರಿಸಿಕೊಳ್ಳುವ ಮೂಲಕ ಗಡಿವಿವಾದ ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ಉದ್ದವ್ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. |