ಇಂದಿರಾನಗರದ ಧೂಪನಹಳ್ಳಿ ಬಳಿ ಕಾರೊಂದು ವಾಯುವಿಹಾರಕ್ಕೆ ಹೊರಟ ಪಾದಚಾರಿಗಳು ಮತ್ತು ಸೈಕಲ್ ಸವಾರೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದ ದುರ್ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಬೆಳಗಿನ ಸಂದರ್ಭದಲ್ಲಿ ವಾಯುವಿಹಾರಕ್ಕೆ ಹೊರಟ ಇಂದಿರಾನಗರದ ನಿವಾಸಿ ಸಿದ್ದಪ್ಪ ರೆಡ್ಡಿ, ಧೂಪನಹಳ್ಳಿಯ ಕೆಂಪೇಗೌಡ, ಡಾ.ಪಣತ್ತೂರು ಅವರ ಮೇಲೆ ಯಮರೂಪಿಯಾಗಿ ಕಾರು ಡಿಕ್ಕಿ ಹೊಡೆದ್ದಲ್ಲದೇ, ಸೈಕಲ್ ಸವಾರ ರಾಧಾಕೃಷ್ಣ ಅವರ ಮೇಲೂ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಕೆ.ಕೆ.ರೆಡ್ಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಕಸ್ಮಿಕವಾಗಿ ಸಂಭವಿಸಿದ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಅಪಘಾತ ನಡೆಸಿದ ಕಾರು ಚಾಲಕ ಮಾತ್ರ ಪರಾರಿಯಾಗಿದ್ದು, ಸಂಜೆ ವೇಳೆಗೆ ಚಾಲಕ ಕಾರ್ತಿಕ್ ಸೋಮಯ್ಯ ಪೊಲೀಸರಿಗೆ ಶರಣಾಗಿದ್ದಾನೆ. |