ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಧಿವೇಶನಕ್ಕೆ ತೆರೆ: ಅಭಿವೃದ್ದಿಗೆ ಸರ್ಕಾರ ಬದ್ದ-ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಧಿವೇಶನಕ್ಕೆ ತೆರೆ: ಅಭಿವೃದ್ದಿಗೆ ಸರ್ಕಾರ ಬದ್ದ-ಸಿಎಂ
ವಿಧಾನಸಭಾ ಕಲಾಪಕ್ಕೆ ತೆರೆ...
PTI
ಕಳೆದ ಎಂಟು ದಿನಗಳಿಂದ ಗಡಿನಾಡಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಗಣಿ ವಿವಾದಕ್ಕೆ ಸೀಮಿತವಾಗುವ ಮೂಲಕ ಉತ್ತರ ಕರ್ನಾಟಕ ಅಭಿವೃದ್ದಿ ಕುರಿತು ಮಹತ್ವದ ಚರ್ಚೆ ನಡೆಯದೇ, ಕೊನೆಗೂ ಕುಂದಾನಗರಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಶನಿವಾರ ವಿಧಾನಸಭಾ ಕಲಾಪಕ್ಕೆ ತೆರೆ ಬಿದ್ದಿದೆ.

ವಿಧಾನಮಂಡಲದ ಅಧಿವೇಶನದ ಕೊನೆಯ ದಿನವಾದ ಇಂದು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಕುರಿತು ಪ್ರತಿಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕುಮಾರಸ್ವಾಮಿ ಅವರು, ಆಡಳಿತಾರೂಢ ಸರ್ಕಾರ ಅಭಿವೃದ್ದಿ ಮಂತ್ರವನ್ನು ಮಾತ್ರ ಜಪಿಸುತ್ತಿದೆ, ಕೇವಲ ವರ್ಗಾವಣೆಯಲ್ಲೇ ಕಾಲ ಕಳೆಯುತ್ತಿದೆ ಎಂದು ಆರೋಪಿಸಿದರು.

ಕೇವಲ ಅಭಿವೃದ್ದಿ ಮಂತ್ರ ಜಪಿಸಿದರೆ ಸಾಕೆ ? ಹಣ ಇದ್ದೂ ಹಿಂದುಳಿದ ವರ್ಗದವರ ಏಳಿಗೆಗೆ ಖರ್ಚು ಮಾಡಿಲ್ಲ ಎಂದಾದರೆ, ಆ ವರ್ಗದ ಜನರ ಅಭಿವೃದ್ದಿ ಹೇಗೆ ಸಾಧ್ಯ ಎಂದು ಖರ್ಗೆ ಖಾರವಾಗಿ ಪ್ರಶ್ನಿಸಿದರು.

ಭದ್ರ ಬುನಾದಿಯ ಮೇಲೆ ಅಭಿವೃದ್ದಿ ಸೌಧ ಎಂಬ ಆಡಳಿತಾರೂಢ ಸರ್ಕಾರದ ಅಭಿವೃದ್ದಿ ಮಂತ್ರದ ಬಗ್ಗೆ ನನಗೆ ನಿರೀಕ್ಷೆ ಇತ್ತು. ಆದರೆ ಪ್ರತಿಪಕ್ಷದ ನಾಯಕರಾದ ಖರ್ಗೆಯವರು ಕೆಲವು ಅಂಕಿ-ಅಂಶಗಳನ್ನು ನೀಡಿದ ನಂತರ, ಬಿಜೆಪಿ ಪಕ್ಷದ ಅಭಿವೃದ್ದಿ ಸೌಧ ಕಟ್ಟುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದ್ದಾರೆಂಬುದು ಸ್ಪಷ್ಟವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

NRB
ಜೆಡಿಎಸ್ ಕ್ಷೇತ್ರಗಳಿಗೆ ತಾರತಮ್ಯ: ಅಭಿವೃದ್ದಿ ಮಂತ್ರ ಜಪಿಸುತ್ತಿರುವ ಸರ್ಕಾರ, ಜೆಡಿಎಸ್ ಕ್ಷೇತ್ರಗಳಲ್ಲಿನ ಅಭಿವೃದ್ದಿ ಬಗ್ಗೆ ತಾರತಮ್ಮ ನೀತಿ ಅನುಸರಿಸುತ್ತಿರುವ ಕುರಿತು ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಿಡುಗಡೆ ಮಾಡಿರುವ ಹಣವನ್ನು ವಾಪಸು ಪಡೆಯುವಂತ ಸೇಡಿನ ರಾಜಕಾರಣ ಮಾಡುತ್ತಿರುವುದಾಗಿಯೂ ಆರೋಪಿಸಿದರು.

ಅಭಿವೃದ್ದಿ ಮಂತ್ರಕ್ಕೆ ನಾವು ಬದ್ಧ: ಯಡಿಯೂರಪ್ಪ

ಅಭಿವೃದ್ದಿ ಪರ ಮಂತ್ರ ಜಪಿಸುತ್ತಾ ಕಾಲ ಕಳೆಯುತ್ತಿದ್ದಾರೆ, ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದಾರೆಂಬ ಪ್ರತಿಪಕ್ಷ ನಾಯಕರ ಆರೋಪವನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಯಡಿಯೂರಪ್ಪ, ನಾನು ಈ ಹಿಂದಿನ ಮುಖ್ಯಮಂತ್ರಿಗಳು ಅಭಿವೃದ್ದಿಯನ್ನೇ ಮಾಡಿಲ್ಲ ಎಂದು ಹೇಳಿಲ್ಲ, ಆದರೆ ಕಳೆದ 60ವರ್ಷಗಳಿಂದ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಆಗಿಲ್ಲ ಎಂಬ ಮಾತಿಗೆ ಈಗಲೂ ಬದ್ದ. ಹಾಗೆ ನಮ್ಮ ಅವಧಿ ಪೂರ್ಣವಾದ ನಂತರ ಅಭಿವೃದ್ದಿ ಬಗ್ಗೆ ನಾವೇನು ಮಾಡಿದ್ದೇವೆ ಎಂಬ ಕುರಿತು ಪ್ರಶ್ನಿಸಿ, ಅದನ್ನು ಬಿಟ್ಟು ಎಲ್ಲದಕ್ಕೂ ಆಕ್ಷೇಪ ಎತ್ತಬೇಡಿ.

ಆಡಳಿತಾರೂಢ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಿರೋಧ ಪಕ್ಷಗಳು ಯಾವುದಕ್ಕೂ ನಮಗೆ ಬೆಂಬಲ ನೀಡಿಲ್ಲ, ಆ ಬಗ್ಗೆ ನನಗೆ ಬೇಸರ ಇದೆ. ನೀವು ಹಿರಿಯರು ನಿಮ್ಮ, ಸಲಹೆ, ಸೂಚನೆಗಳನ್ನು ನೀಡಿ. ಈವರೆಗಿನ ರಾಜಕಾರಣ ಮರೆಯೋಣ, ಅಭಿವೃದ್ದಿ ಪಥದತ್ತ ಎಲ್ಲರೂ ಒಟ್ಟಾಗಿ ಹೆಜ್ಜೆ ಹಾಕೋಣ ಎಂದು ಮನವಿ ಮಾಡಿದರು.
NRB
ವರ್ಗಾವಣೆ ಕುರಿತು ಪ್ರತಿಪಕ್ಷಗಳು ನಡೆಸುತ್ತಿರುವ ಟೀಕಾಪ್ರಹಾರಕ್ಕೆ ತಿರುಗೇಟು ನೀಡಿದ ಅವರು, 2005ರಲ್ಲಿ 9089ಮಂದಿ ವರ್ಗಾವಣೆಯಾಗಿದ್ದಾರೆ. 2006ರಲ್ಲಿ 7740 ವರ್ಗಾವಣೆ, 2007ರಲ್ಲಿ 4816 ವರ್ಗಾವಣೆ, 2008ರಲ್ಲಿ 2669 ವರ್ಗಾವಣೆ ಮಾಡಿರುವುದಾಗಿ ಅಂಕಿ-ಅಂಶಗಳ ಸಹಿತ ವಿವರಣೆ ನೀಡಿದರು.

ನಂಜುಂಡಪ್ಪ ವರದಿ ಅನುಷ್ಠಾನಕ್ಕೂ ಸಿದ್ದ: ಉತ್ತರಕರ್ನಾಟಕ ಅಭಿವೃದ್ದಿ ಕುರಿತಂತೆ ನಂಜುಂಡಪ್ಪ ವರದಿ ಜಾರಿಗೆ ಸರ್ಕಾರ ಬದ್ದವಾಗಿದೆ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು, ಈ ಬಾರಿಯ ಅಧಿವೇಶನದಲ್ಲೂ ಉ.ಕ.ಅಭಿವೃದ್ದಿ ಕುರಿತು ಗಂಭೀರವಾಗಿ ಚರ್ಚೆ ನಡೆಯಬೇಕಿತ್ತು. ಆದರೆ ಹಲವಾರು ಕಾರಣಗಳಿಂದ ಆದು ಸಾಧ್ಯವಾಗಿಲ್ಲ ಎಂದು ವಿಷಾದಿಸಿದ ಅವರು, ಆ ನಿಟ್ಟಿನಲ್ಲಿ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಕುಂದಾನಗರಿ ಅಭಿವೃದ್ದಿಗೆ ವಿಶೇಷ ಪ್ಯಾಕೆಜ್: ಅಧಿವೇಶನದ ಕೊನೆಯ ಎರಡು ದಿನಗಳ ಕಾಲ ಗಣಿ ಹಗರಣ ಚರ್ಚೆಗೆ ವಿರಾಮ ನೀಡುವ ಮೂಲಕ, ಉತ್ತರ ಕರ್ನಾಟಕ ಅಭಿವೃದ್ದಿ ಕುರಿತು ಚರ್ಚೆ ನಡೆಯಿತು. ಅಲ್ಲದೇ ಬೆಳಗಾವಿ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ಅನ್ನು ಮುಖ್ಯಮಂತ್ರಿಗಳು ಘೋಷಿಸಿದರು. ಹೈನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಒಂದು ಸಾವಿರ ಹಾಲು ಉತ್ಪಾದಕರ ಸಂಘಗಳ ಸ್ಥಾಪನೆ, ನೇಕಾರರ ಅಭಿವೃದ್ದಿ, ಆರೋಗ್ಯ ಕ್ಷೇತ್ರದ ಅಭಿವೃದ್ದಿ, ಧಾರವಾಡದಲ್ಲಿ ಬೆಂಗಳೂರಿನ ನಿಮಾನ್ಸ್ ಮಾದರಿಯಲ್ಲೇ ಮಾನಸಿಕ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಯೋಜಿಸಿದ್ದು ಅದಕ್ಕಾಗಿ ಸರ್ಕಾರ 10 ಕೋಟಿ ರೂಪಾಯಿ ಮೀಸಲಿಟ್ಟಿರುವುದಾಗಿ ತಿಳಿಸಿದರು.

ಉತ್ತರ ಕರ್ನಾಟಕ ಭಾಗಕ್ಕೆ 500ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಗಡಿಭಾಗದ ಜಿಲ್ಲೆಗಳ ಅಭಿವೃದ್ದಿಗೆ 250ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದಾಗಿ ತಿಳಿಸಿದರು.

ಸಾರ್ವಜನಿಕ ಹಾಗೂ ಖಾಸಗಿಯವರ ಸಹಭಾಗಿತ್ವದಲ್ಲಿ ಮೊದಲ ಹಂತದಲ್ಲಿ ಸುಮಾರು 10ಸಾವಿರ ಕಿ.ಮಿ. ರಸ್ತೆಗಳನ್ನು ಅಭಿವೃದ್ದಿಪಡಿಸಲಾಗುವುದು. ಅದರಲ್ಲಿ ಉತ್ತರಕರ್ನಾಟಕ ಭಾಗದ 5,500 ಕಿ.ಮೀ.ರಸ್ತೆಗಳ ಅಭಿವೃದ್ದಿಗೆ ಪ್ರಾಧಾನ್ಯತೆ ನೀಡಲಾಗುವುದು ಎಂದರು.

ರೇಣುಕ ಯಲ್ಲಮ್ಮ ದೇವಸ್ಥಾನ ಅಭಿವೃದ್ದಿಗಾಗಿ 50ಕೋಟಿ, ಬೆಳಗಾಂ ಜನರಲ್ ಆಸ್ಪತ್ರೆಯನ್ನು 740 ಬೆಡ್‌ಗಳಿಂದ 1000 ಬೆಡ್‌ಗಳಿಗೆ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸುಮಾರು 12.50ಕೋಟಿ ಮೀಸಲಿಡಲಾಗಿದೆ.

ಗಮನಸೆಳೆದ ಸಿದ್ದರಾಮಯ್ಯ: ಬೆಳಗಾವಿಯ ಅಧಿವೇಶನದಲ್ಲಿ ಆಗಾಗ ಮುಖದರ್ಶನ ಮಾಡಿಸಿ ಹೋಗುತ್ತಿದ್ದ ಸಿದ್ದರಾಮಯ್ಯನವರು, ಕೊನೆಯ ದಿನದಂದು ಸದನದಲ್ಲಿನ ಚರ್ಚೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು. ರಾಜ್ಯದ ಅಭಿವೃದ್ದಿ ಮತ್ತು ಬಜೆಟ್ ಕುರಿತು ಕೊರತೆ ಬೀಳುವ ಹಣಕಾಸು ಬಗ್ಗೆ ಕುಮಾರಸ್ವಾಮಿ ಅವರು ಎತ್ತಿದ ಪ್ರಶ್ನೆಗೆ ಸಾಥ್ ನೀಡಿದ ಸಿದ್ದರಾಮಯ್ಯನವರು, ಎಂದಿನಂತೆ ತಮ್ಮದೇ ಶೈಲಿಯಲ್ಲಿ ವಿಷಯ ಮಂಡನೆ ಮಾಡುವ ಮೂಲಕ ಸಲಹೆ ನೀಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಸುರಕ್ಷತೆ'ಗೆ ಪೊಲೀಸ್ ಜತೆ ಕೈಜೋಡಿಸಿದ ಹೊಟೇಲ್ ಸಂಘ
ಮತ್ತೆ ಗಣಿ ತನಿಖೆ: ನ್ಯಾ.ಸಂತೋಷ್ ಹೆಗ್ಡೆ ಕಿಡಿ
ಕಾಂಗ್ರೆಸ್‌‌ನಲ್ಲಿದ್ದರೆ ಮಾತ್ರ ಸಿದ್ದು ಸಿಎಂ: ದೇಶಪಾಂಡೆ
ಒಬಾಮ 'ಚಹಾಕೂಟ'ದಲ್ಲಿ ಸಾಂಗ್ಲಿಯಾನ ಅತಿಥಿ
ಬೆಂಗಳೂರು: ಭೀಕರ ಅಪಘಾತಕ್ಕೆ ನಾಲ್ವರು ಬಲಿ
ಸರಕಾರಕ್ಕೆ ಹೈಕೋರ್ಟ್ ನಿರ್ದೇಶ