ಗುಲ್ಬರ್ಗಾ ನಗರದ ಹೊರವಲಯವಾದ ಸುಲ್ತಾನ್‌ಪುರ್ ಎಂಬಲ್ಲಿ ಶುಕ್ರವಾರ ರಾತ್ರಿ ಭಾರೀ ಪ್ರಮಾಣದಲ್ಲಿ ಸ್ಫೋಟಕ ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಮೋನಿಯಂ ನೈಟ್ರೇಟ್ ಸೇರಿದಂತೆ ಜೆಲೆಟಿನ್ ಕಡ್ಡಿ, ಡಿಟೋನೇಟರ್‌ಗಳನ್ನು ಭಾರೀ ಪ್ರಮಾಣದಲ್ಲಿ ವಶಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ.
ಸುಲ್ತಾನ್‌ಪುರದಲ್ಲಿರುವ ಗೋಡೌನ್ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಸುಮಾರು 6.5ಲಕ್ಷ ರೂಪಾಯಿಗಳ ಸ್ಫೋಟಕಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಅಲ್ಲದೇ ಮೂರು ವಾಹನಗಳನ್ನು ವಶಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಗೋಡೌನ್ ಮ್ಯಾನೇಜರ್ ನಂದಲಾಲ್ ಎಂಬಾತನನ್ನು ಬಂಧಿಸಿದ್ದು, ಮಾಲೀಕ ದಿನೇಶ್ ಲಾಡ್ಡಾ ಪರಾರಿಯಾಗಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ. |