ಹಂಪೆಯ ಆನೆಗೊಂದಿಯಲ್ಲಿನ ತುಂಗಾಭದ್ರಾ ನದಿ ಪಾಲಾದ ನಿರ್ಮಾಣ ಹಂತದಲ್ಲಿದ್ದ ತೂಗು ಸೇತುವೆ ಕುಸಿತಕ್ಕೆ ಸಿಲುಕಿದ್ದ ಇಬ್ಬರು ಕಾರ್ಮಿಕರ ದೇಹಗಳು ಶನಿವಾರ ದೊರಕಿದೆ.
ಮೃತದೇಹಗಳನ್ನು ವೆಂಕಟಾಪುರದ ಹುಲಗೆಪ್ಪ ಹಾಗೂ ಗಾರಿ ನಿಂಗಪ್ಪ ಎಂಬುವರ ದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಇನ್ನೂ ಏಳು ಕಾರ್ಮಿಕರ ಮೃತದೇಹಕ್ಕಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಮೋಹನ್ ಚಕ್ರವರ್ತಿ ತಿಳಿಸಿದ್ದಾರೆ.
ನಿರ್ಮಾಣ ಹಂತದಲ್ಲಿದ್ದ ಆನೆಗೊಂದಿ ತೂಗು ಸೇತುವೆ ಗುರುವಾರ ರಾತ್ರಿ ಕುಸಿದು ಬಿದ್ದಿತ್ತು. ಆ ಸಂದರ್ಭದಲ್ಲಿ 36ಕಾರ್ಮಿಕರನ್ನು ರಕ್ಷಿಸಲಾಗಿತ್ತು. ಆದರೆ ಅವಶೇಷಗಳಡಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಹೊರತೆಗೆಯುವಲ್ಲಿ ಜಿಲ್ಲಾಡಳಿತ ಕಳೆದ ಮೂರು ದಿನಗಳಿಂದ ಹರಸಾಹಸಪಡುತ್ತಿದ್ದು, ಇಂದು ಎರಡು ಮೃತದೇಹಗಳನ್ನು ಪತ್ತೆ ಹಚ್ಚಿದ್ದಾರೆ. |