ಯರ್ರಾಬಿರ್ರಿ ಕಾರು ಚಾಲನೆ ಮಾಡಿ ನಾಲ್ಕು ಮಂದಿಯ ಸಾವಿಗೆ ಕಾರಣನಾದ ಕಾರ್ತಿಕ್ ಕೆ.ಸೋಮಯ್ಯ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನ ಜಾವದವರೆಗೆ ಸ್ನೇಹಿತರೊಂದಿಗೆ ಮಧ್ಯ ಸೇವಿಸಿರುವುದಾಗಿ ಪೊಲೀಸ್ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ.
ಕಾರ್ತಿಕ್‌ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆರೋಪಿಯನ್ನು ಮಂಗಳವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ತಿಕ್ ಮೂಲತಃ ಕೊಡಗು ಜಿಲ್ಲೆ ವಿರಾಜಪೇಟೆಯ ನಿವಾಸಿಯಾಗಿದ್ದು, ನಗರದ ಕೋರಮಂಗಲ ದೊಮ್ಮಲೂರು ಎಂ.ಐ.ಜಿ ಬ್ಲಾಕ್‌ನಮನೆಯೊಂದರಲ್ಲಿ ತಂದೆ ತಾಯಿಯೊಂದಿಗೆ ವಾಸವಾಗಿದ್ದ. ಕೋರಮಂಗಲದ 141 ಚೆರಕಾನ್ ಕಂಪೆನಿಯಲ್ಲಿ ಆಪರೇಷನಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಶುಕ್ರವಾರ ಮಧ್ಯರಾತ್ರಿಯವರೆಗೂ ಇಂದಿರಾನಗರದ ಕ್ಲಬ್‌ನಲ್ಲಿ ಕಂಠಪೂರ್ತಿ ಮದ್ಯ ಪಾನ ಮಾಡಿದ್ದರು. ಅಲ್ಲದೇ, ಆ ರಾತ್ರಿ ಆತ ನಿದ್ರೆ ಮಾಡದೆ ಸ್ನೇಹಿತರೊಡನೆ ಹರಟಿದ್ದ ಎಂದು ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟಿರುವುದಾಗಿ ತಿಳಿಸಿದ್ದಾರೆ.
ಮುಂಜಾನೆಯವರೆಗೆ ಕೋರಮಂಗಲದಲ್ಲಿದ್ದ ಆರೋಪಿ ಬೆಳಿಗ್ಗೆ ಇಂದಿರಾನಗರದ ಮತ್ತೊಬ್ಬ ಸ್ನೇಹಿತನ ಮನೆಗೆ ಉಪಾಹಾರ ಸೇವನೆ ಮಾಡಲು ಆತುರವಾಗಿ ತೆರಳುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ವಾಯುವಿಹಾರಕ್ಕೆ ತೆರಳಿದ್ದವರು ಮೇಲೆ ಹರಿದಿದೆ.
ಆರೋಪಿ ಮದ್ಯಪಾನ ಮಾಡಿ 24 ಗಂಟೆ ನಂತರ ಇದರ ನಶೆ ಇಳಿದಿರಲಿಲ್ಲ. ಇದು ವೈದ್ಯಕೀಯ ತಪಾಸಣೆಯಲ್ಲೂ ದೃಢಪಟ್ಟಿದೆ. |