ದೇವದಾಸಿಯರ ಉದ್ದಾರಕ್ಕೆ ಹೊಸ ಕಾನೂನು ತರುವುದಾಗಿ ಹೇಳುವ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಕಚೇರಿಯಲ್ಲಿ ಸೇವೆಯಲ್ಲಿದ್ದ ದೇವದಾಸಿಯೊಬ್ಬರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಯಡಿಯೂರಪ್ಪ ಅವರ ಮಾತು ಮತ್ತು ಕೃತಿಗೂ ಅಪಾರ ವ್ಯತ್ಯಾಸವಿದೆ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ ಎಂದರು.
ನಾನು ಮುಧೋಳದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾಗ ಒಬ್ಬ ದೇವದಾಸಿ ಮಹಿಳೆ ವೀರಶೈವ ವ್ಯಕ್ತಿಯನ್ನು ವಿವಾಹವಾಗಿದ್ದು ಗಮನಕ್ಕೆ ಬಂತು. ಆ ಮಹಿಳೆಗೆ ಊರಿನ ಜನರು ಕಾಟ ಕೊಡುತ್ತಿದ್ದರು. ನಾನು ಅದನ್ನು ತಪ್ಪಿಸಲು ಸಿಎಂ ಕಚೇರಿಯಲ್ಲಿ ಕೆಲಸ ಕೊಡಿಸಿದೆ. ಆದರೆ, ಯಡಿಯೂರಪ್ಪ ಆ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಇನ್ನು ದೇವದಾಸಿ ಮಹಿಳೆಯರ ಉದ್ದಾರ ಎಲ್ಲಿಂದ ಬಂತು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. |