ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದಾಳಿ ಹಿನ್ನೆಲೆ: ರಾಜಭವನಕ್ಕೆ ಸಿಸಿಟಿವಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾಳಿ ಹಿನ್ನೆಲೆ: ರಾಜಭವನಕ್ಕೆ ಸಿಸಿಟಿವಿ
ಇದೇ ಮೊದಲ ಬಾರಿಗೆ ರಾಜಭವನಕ್ಕೆ ಗೌಪ್ಯ ಕ್ಯಾಮೆರಾ ಅಳವಡಿಸಲಾಗಿದ್ದು, ರಾಜ್ಯಪಾಲ ರಾಮೇಶ್ವರ ಠಾಕೂರ್ ಸೋಮವಾರ ಇದಕ್ಕೆ ಚಾಲನೆ ನೀಡಿದರು. ರಾಜ್ಯಪಾಲರ ಕಚೇರಿ, ರಾಜಭವನದ ಸಿಬ್ಬಂದಿ ಕಾರ್ಯಾಲಯ ಸೇರಿದಂತೆ ಭವನದ ಸುತ್ತಮುತ್ತ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ರಾಜಭವನದ ಒಳಗೆ ಹಾಗೂ ಹೊರಭಾಗದ ಒಟ್ಟು 66 ಮೂಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕ್ಯಾಮೆರಾಗಳು ದಿನವಿಡೀ ಕಾರ್ಯನಿರ್ವಹಿಸಲಿವೆ. ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ರಾಜಭವನಕ್ಕೆ ಭದ್ರತೆ ಒದಗಿಸುವ ದೃಷ್ಟಿಯಿಂದ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ರಾಜಭವನದಲ್ಲಿ ಸಂಭವಿಸುವ ಘಟನೆಗಳು, ಅಪರಿಚಿತ ವ್ಯಕ್ತಿಗಳ ಪ್ರವೇಶವನ್ನೂ ಕ್ಯಾಮರಾಗಳು ಸೆರೆಹಿಡಿದು 25 ಸೆಕೆಂಡುಗಳಲ್ಲಿ ನಿಯಂತ್ರಣ ಕೊಠಡಿಗೆ ರವಾನಿಸುತ್ತವೆ. ನಿಯಂತ್ರಣ ಕೊಠಡಿಯೂ ಸಹ 24 ಗಂಟೆಯೂ ಕಾರ್ಯ ನಿರ್ವಹಿಸುವುದರಿಂದ ಯಾವುದೇ ಆಕಸ್ಮಿಕಗಳು ಸಂಭವಿಸಿದರೂ ತಕ್ಷಣ ಪೊಲೀಸರು ಕಾರ್ಯೋನ್ಮುಖರಾಗಬಹುದು. ಇವುಗಳ ನಿರ್ವಹಣೆ ಬಗ್ಗೆ ಪೊಲೀಸರಿಗೆ ತರಬೇತಿ ನೀಡಲಾಗಿದೆ.

ಈಗಾಗಲೇ ವಿಧಾನಸೌಧ ಹಾಗೂ ನಗರದ ಪಂಚತಾರಾ ಹೊಟೇಲ್‌‌ಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಬ್ ದಾಳಿ: ರಾಮಸೇನೆಯ ಪ್ರಸಾದ್ ಅತ್ತಾವರ ಬಂಧನ
ಸೂರ್ಯಗ್ರಹಣ
ಬಳ್ಳಾರಿ: ಇಂದು ಸಭೆ
ಪಬ್ ದಾಳಿ : ಬಂಧಿತರ ವಿರುದ್ಧ ಗೂಂಡಾ ಕಾಯ್ದೆ
ಶಾಸ್ತ್ರೀಯ ಸ್ಥಾನ: ಸರ್ಕಾರದ ಧೋರಣೆಗೆ ಆಕ್ರೋಶ
ದೇವದಾಸಿ ಮಹಿಳೆಯ ಕೆಲಸ ತೆಗೆದ ಸಿಎಂ: ಎಚ್‌‌ಡಿಕೆ