ಹಿಂದುತ್ವದ ಗುತ್ತಿಗೆಯನ್ನು ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳಿಗೆ ಯಾರೂ ನೀಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಹಿಂದೂ ಸಂಸ್ಕೃತಿಯ ಹೆಸರಿನಲ್ಲಿ ರಕ್ಷಣೆಯ ಹೆಸರಿನಲ್ಲಿ ಬಿಜೆಪಿಯ ಅಂಗ ಸಂಸ್ಥೆಗಳಾದ ಬಜರಂಗದಳ ಮತ್ತು ಶ್ರೀರಾಮಸೇನೆ ನಡೆಸುತ್ತಿರುವ ದೌರ್ಜನ್ಯ ತಲೆತಗ್ಗಿಸುವಂತಹದ್ದು ಎಂದು ತರಾಟೆಗೆ ತೆಗೆದುಕೊಂಡರು.
ಮಂಗಳೂರಿನ ಪಬ್‌ಗಳಲ್ಲಿ ಯಾವುದೇ ರೀತಿಯ ಅಶ್ಲೀಲ ನೃತ್ಯ ಪ್ರದರ್ಶನ ಮಾಡುತ್ತಿದ್ದ ದೃಶ್ಯ ಟಿವಿ ವಾಹಿನಿ ತೋರಿಸಿದ ದೃಶ್ಯಗಳಲ್ಲಿ ಕಾಣಿಸಲಿಲ್ಲ. ಆದರೂ ಶ್ರೀರಾಮ ಸೇನೆಯ ಕಾರ್ಯಕರ್ತರು ಹಠಾತ್ ದಾಳಿ ನಡೆಸಿರುವುದು ಅನಾಗರಿಕ ವರ್ತನೆಯಾಗಿದೆ ಎಂದು ಟೀಕಿಸಿದರು.
ಈ ಘಟನೆ ಬಗ್ಗೆ ಮುಖ್ಯಮಂತ್ರಿ, ಗೃಹಮಂತ್ರಿಗಳು ಯಾವುದೇ ನೀಡದಿರುವುದನ್ನು ನೋಡಿದರೆ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದೆ. ಇದರಿಂದ ಮುಂದಿನ ದಿನ ರಾಜ್ಯ ಯಾವ ದಿಕ್ಕಿನತ್ತ ಸಾಗಲಿದೆ ಎಂಬುದರ ಅರಿವಾಗುತ್ತಿದೆ ಎಂದರು. |