ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಶ್ರೀರಾಮಸೇನೆ ನಿಷೇಧದ ಬಗ್ಗೆ ಪರಿಶೀಲನೆ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀರಾಮಸೇನೆ ನಿಷೇಧದ ಬಗ್ಗೆ ಪರಿಶೀಲನೆ: ಸಿಎಂ
ಮಂಗಳೂರಿನ ಪಬ್ ದಾಳಿ ಘಟನೆಯನ್ನು ರಾಜಕೀಯಕರಣಗೊಳಿಸಲಾಗುತ್ತಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಶ್ರೀರಾಮ ಸೇನೆಯನ್ನು ನಿಷೇಧಿಸುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದ್ದಾರೆ.

ಬಿಜೆಪಿ ಪರಿವಾರಕ್ಕೂ ಶ್ರೀರಾಮಸೇನೆಗೂ ಯಾವುದೇ ಸಂಬಂಧವಿರದಿದ್ದರೂ, ವಿರೋಧ ಪಕ್ಷಗಳು ಈ ಘಟನೆಗೆ ರಾಜಕೀಯ ಬಣ್ಣ ನೀಡುತ್ತಿವೆ ಎಂದು ಮುಖ್ಯಮಂತ್ರಿಗಳು ಸುದ್ದಿಗಾರರೊಂದಿಗೆ ಮಾತನಾಡುತ್ತ ಆಪಾದಿಸಿದರು.

ಈ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ವಾಸ್ತವಾಂಶಗಳನ್ನು ಅರಿಯದೇ ರಾಜಕೀಯ ಹೇಳಿಕೆ ನೀಡುವ ಮೂಲಕ ಪ್ರಕರಣವನ್ನು ರಾಜಕೀಯಕರಣಗೊಳಿಸುತ್ತಿವೆ ಎಂದ ಅವರು, ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.

ಈ ಘಟನೆಗೆ ಕಾರಣವಾದ ಶ್ರೀರಾಮಸೇನೆಯನ್ನು ನಿಷೇಧಿಸುವಿರಾ?ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಸಂಘಟನೆಯನ್ನು ನಿಷೇಧಿಸುವುದು ಸಮಸ್ಯೆಗೆ ಪರಿಹಾರ ಅಲ್ಲ. ಈ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಚಾರ್ಯ ಅಸಮರ್ಥ ಗೃಹಮಂತ್ರಿ: ಜನಾರ್ದನ ಪೂಜಾರಿ
'ಕೈ' ಬಿಡಲ್ಲ, ಮುಖ್ಯಮಂತ್ರಿ ಆಕಾಂಕ್ಷಿ ನಾನು: ಸಿದ್ದರಾಮಯ್ಯ
ಪಬ್ ದಾಳಿ: ಬೆಳಗಾವಿಯಲ್ಲಿ ಮುತಾಲಿಕ್ ಬಂಧನ
ಪಬ್ ದಾಳಿ: ಮುತಾಲಿಕ್ ಮಹಾರಾಷ್ಟ್ರಕ್ಕೆ ಪರಾರಿ
ಜ.31ಕ್ಕೆ ಸಿದ್ದು ಹೊಸ ಪಕ್ಷ ಉದಯ: ವರ್ತೂರು
ಸಿದ್ದರಾಮಯ್ಯ ಇಬ್ಬಗೆ ನಿಲುವು ಸರಿಯಲ್ಲ:ದೇಶಪಾಂಡೆ