ಭೂಗರ್ಭದಲ್ಲಿ ದೊರೆಯುವ ಯಾವುದೇ ಖನಿಜ ಸಂಪತ್ತಿರಲಿ ಅದು ಸರ್ಕಾರದ ಆಸ್ತಿ. ಇದರಲ್ಲಿ ಭೂಮಾಲೀಕರಿಗೆ ಯಾವುದೇ ರೀತಿಯ ಅಧಿಕಾರ ಇಲ್ಲ ಎಂದು ಹೈಕೋರ್ಟ್ ಮಂಗಳವಾರ ತಿಳಿಸಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆಯ 70ನೇ ಕಲಮಿನಲ್ಲಿ ಈ ಬಗ್ಗೆ ಉಲ್ಲೇಖವಾಗಿರುವುದಾಗಿ ನ್ಯಾಯಮೂರ್ತಿಗಳಾದ ಎಸ್.ಆರ್.ಬನ್ನೂರಮಠ ಹಾಗೂ ವೇಣುಗೋಪಾಲಗೌಡ ಅವರನ್ನೊಳಗೊಂಡ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ಈ ಕಾಯ್ದೆಯ ಆಧಾರದ ಮೇಲೆ ರಾಯಚೂರಿನ ಲಿಂಗಸುಗೂರು ತಾಲೂಕಿನ ಹಟ್ಟಿಯಲ್ಲಿ ಚಿನ್ನದ ಗಣಿಗಾರಿಕೆಗಾಗಿ ಭೂಸ್ವಾಧೀನ ಪಡಿಸಿಕೊಂಡಿರುವ ಭೂಮಾಲೀಕರಿಗೆ ನೀಡಬೇಕಾಗಿರುವ ಪರಿಹಾರದ ಮೊತ್ತವನ್ನು ಕೋರ್ಟ್ ನಿಗದಿ ಮಾಡಿದೆ.
ಅಲ್ಲದೇ ಭೂಕಂದಾಯ ಕಾಯ್ದೆಯ ಆಧಾರದ ಮೇಲೆ ಪರಿಹಾರ ಮೊತ್ತವನ್ನು ನಿಗದಿ ಮಾಡಿದ ಕೋರ್ಟ್, ಜಮೀನಿನ ಪ್ರತಿ ಎಕರೆಗೆ 25ಸಾವಿರ ರೂಪಾಯಿ ನೀಡುವಂತೆ ಭೂಸ್ವಾಧೀನ ಅಧಿಕಾರಿಗಳಿಗೆ ನಿರ್ದೇಶಿಸಿತು. |