ಮಂಗಳೂರಿನಲ್ಲಿ ನಡೆದ ಪಬ್ ದಾಳಿ ಈಗ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದ್ದು, ಶ್ರೀರಾಮ ಸೇನೆಯವರು ನಡೆಸಿದ್ದಾರೆ ಎನ್ನಲಾದ ದಾಳಿಯನ್ನು ಈ ಹಿಂದೆ ಯಾರೂ ಮಾಡದ ಅಕ್ಷಮ್ಯ ಅಪರಾಧವೆಂಬಂತೆ ಬಿಂಬಿಸುವ ಮೂಲಕ ಕೆಲವು ರಾಜಕೀಯ ಪಕ್ಷಗಳು ಇದನ್ನು ವೋಟ್ ಬ್ಯಾಂಕ್ ಆಗಿ ಪರಿವರ್ತಿಸುತ್ತಿದ್ದಾರೆ. ಕರ್ನಾಟಕ ಮಹಿಳಾ ರಕ್ಷಣಾ ವೇದಿಕೆ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ವೇದಿಕೆಯ ಅಧ್ಯಕ್ಷೆ ಭಾರ್ಗವಿ ನಾರಾಯಣ್ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ಹಿಂದೂ ಸಂಸ್ಕೃತಿ. ಮಾತೃದೇವೋಭವ ಎಂದು ಸ್ತ್ರೀಯರನ್ನು