ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದಾಳಿ: ಭಾರತಾಂಬೆಯ ಹೆಸರಿನಲ್ಲಿ ದೌರ್ಜನ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾಳಿ: ಭಾರತಾಂಬೆಯ ಹೆಸರಿನಲ್ಲಿ ದೌರ್ಜನ್ಯ
'ಭಾರತ ಮಾತಾಕೀ ಜೈ' ಎಂದು ಘೋಷಣೆ ಕೂಗಿ ನಮ್ಮನ್ನು ಒದ್ದು ಹಲ್ಲೆ ನಡೆಸಿ ನಮ್ಮ ಉಡುಪನ್ನು ಕಳಚಲು ಮುಂದಾದರು ಎಂದು ಪಬ್ ದಾಳಿಯಲ್ಲಿ ಹಲ್ಲೆಗೆ ಗುರಿಯಾದ ಯುವತಿಯೊಬ್ಬಳು ನೋವನ್ನು ತೋಡಿಕೊಂಡಿದ್ದಾರೆ.

ಅದೊಂದು ಕೆಟ್ಟ ಅನುಭವ. ಪಬ್‌‌ನಲ್ಲಿರುವ ಜನರ ಸಂಖ್ಯೆಗಿಂತ ದಾಳಿ ಮಾಡಿದವರ ಸಂಖ್ಯೆ ಹೆಚ್ಚಿತ್ತು. ಹಾಗಾಗಿ ನಮ್ಮ ರಕ್ಷಣೆಗೆ ಯಾರೂ ಧಾವಿಸಲಿಲ್ಲ ಎಂದು ತಿಳಿಸಿದ್ದಾರೆ. ಈ ಘಟನೆಯಿಂದ ಹಲ್ಲೆಗೊಳಗಾದ ಮಹಿಳೆಯರಾರೂ ಮನೆಯಿಂದ ಹೊರಗೆ ಬಂದಿಲ್ಲ. ಕೆಲವರಂತೂ ನಗರ ಬಿಟ್ಟು ಹೋಗಿದ್ದಾರೆ. ಅಂದು ಪಬ್‌‌ನಲ್ಲಿದ್ದ ಯುವತಿಯರ ಪೈಕಿ ಹೆಚ್ಚಿನವರು ಸ್ಥಳೀಯರೇ.

ಶ್ರೀರಾಮ ಸೇನೆಯ ಕಾರ್ಯಕರ್ತರು ಮತ್ತು ಟಿವಿ ಕ್ಯಾಮರಾ ಸಿಬ್ಬಂದಿ ಮಧ್ಯಾಹ್ನ 3.50ಕ್ಕೆ ಪಬ್ ಮುಂದೆ ಗುಂಪಾಗಿ ಸೇರಿದ್ದರು. ಪಬ್‌‌ನವ್ಯವಸ್ಥಾಪಕರನ್ನು ಹೊರಗೆ ಬರುವಂತೆ ಕರೆದರು ಎಂದು ಶೋ ನಡೆಸುವ ಸಂತೋಷ್ ತಿಳಿಸಿದರು. ಪಬ್‌‌ನೊಳಗೆ ನುಗ್ಗಿದ ಕಾರ್ಯಕರ್ತರನ್ನು ಥಳಿಸಲು ಆರಂಭಿಸಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಒಳ ಹೋಗದಂತೆ ತಾವು ನೀಡಿದ ಮನವಿಗೆ ಕ್ಯಾಮರಾ ಸಿಬ್ಬಂದಿ ಒಪ್ಪಿದರೂ ಶ್ರೀರಾಮ ಸೇನೆಯ ಕಾರ್ಯಕರ್ತರು ಮಾತ್ರ ಅವರನ್ನು ಒಳಗೆ ಎಳೆದುಕೊಂಡು ಹೋದರು ಎಂದು ಘಟನೆ ಕುರಿತು ವಿವರಣೆ ನೀಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕುಟುಂಬ ರಾಜಕಾರಣ ಮಾಡಲಾರೆ: ಯಡಿಯೂರಪ್ಪ
ಬುದ್ದಿಜೀವಿಗಳ ಸಲಹೆಯ ಅಗತ್ಯವಿಲ್ಲ: ಕೃಷ್ಣಯ್ಯ ಶೆಟ್ಟಿ
ಯಡಿಯೂರಪ್ಪರನ್ನು ನೆಲಕ್ಕುರುಳಿಸಿದ 'ಕುರ್ಚಿ'
ಯುವಜನತೆ ಹದ್ದುಮೀರಿ ವರ್ತಿಸಬಾರದು:ಮಹಿಳಾ ರಕ್ಷಣಾ ವೇದಿಕೆ
ಸಾಹಿತ್ಯ ಸಮ್ಮೇಳನ ಫೆ.4ಕ್ಕೆ ಮುಂದೂಡಿಕೆ
ಗಣಿ ಖನಿಜಗಳು ಸರ್ಕಾರದ ಆಸ್ತಿ: ಹೈಕೋರ್ಟ್