ಸಿದ್ದರಾಮಯ್ಯ ತಮ್ಮ ಬೆಂಬಲಿಗ ಪಕ್ಷೇತರ ಶಾಸಕರ ಮೂಲಕ ಹೊಸ ಪಕ್ಷ ರಚನೆ ಮಾಡಲಾಗುತ್ತಿದೆ ಎಂದು ಹೇಳಿಕೆ ಕೊಡಿಸುತ್ತಾರೆ. ಮತ್ತೊಂದೆಡೆ ಇನ್ನೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ ಎಂದು ಹೇಳುತ್ತಾರೆ. ಇದು ಸಿದ್ದರಾಮಯ್ಯ ಅವರು ಅನುಸರಿಸುತ್ತಿರುವ ಬ್ಲ್ಯಾಕ್ ಮೇಲ್ ತಂತ್ರ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಸಿದ್ದರಾಮಯ್ಯ ಅವರ ಇಂತಹ ಹೇಳಿಕೆಯನ್ನು ಗಮನಿಸಿದರೆ, ಸಂಧಾನ ಮಾತುಕತೆ ನಡೆಸಲು ದೆಹಲಿಗೆ ಬರುವಂತೆ ಕಾಂಗ್ರೆಸ್ ವರಿಷ್ಠರು ಆಹ್ವಾನ ನೀಡುವುದನ್ನು ನೋಡಿದರೆ ಇಬ್ಬರಿಗೂ ಎಂತಹ ಶೋಚನೀಯ ಸ್ಥಿತಿ ಬಂದಿದೆ ಎಂಬುದು ಅರ್ಥವಾಗುತ್ತದೆ,ಸಿದ್ದರಾಮಯ್ಯ ಅವರಿಗಂತೂ ಕಾಡಿ, ಬೇಡಿ ಅಧಿಕಾರ ಪಡೆದುಕೊಳ್ಳುವಂತ ಸ್ಥಿತಿ ಬರಬಾರದಿತ್ತು ಎಂದು ವ್ಯಂಗ್ಯವಾಡಿದ್ದಾರೆ.
ಅಲ್ಲದೇ ರಾಷ್ಟ್ರೀಯ ಮಟ್ಟದಲ್ಲಿ ತೃತೀಯ ರಂಗದ ಜತೆಗೆ ಜೆಡಿಎಸ್ ಕೈಜೋಡಿಸಿರುವುದರಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಾಗುವುದು. ಕಾಂಗ್ರೆಸ್ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಸ್ತಾಪ ಪಕ್ಷದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. |