ಕನ್ನಡ ಬಾವುಟವನ್ನು ಹಾರಿಸುವುದು ತಪ್ಪು ಎಂದು ತರಾಟೆಗೆ ತೆಗೆದುಕೊಂಡಿರುವ ಖಾಸಗಿ ಕಂಪೆನಿಯೊಂದು ಎಂಟು ಮಂದಿ ನೌಕರರನ್ನು ಕೆಲಸದಿಂದ ತೆಗೆದುಹಾಕಿರುವ ಘಟನೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ನಗರದ ಹೊಸೂರಿನ ಸಮೀಪ ಇರುವ ಗಾರ್ಮೆಂಟ್ ಕಂಪೆನಿಯಲ್ಲಿ ಕನ್ನಡ ಧ್ವಜ ಹಾರಿಸಿದ್ದನ್ನು ಖಂಡಿಸಿ, ಆಡಳಿತ ಮಂಡಳಿ ಎಂಟು ಜನರನ್ನು ವಜಾ ಮಾಡಿದೆ.
ಕಚೇರಿಯ ಮೇಲೆ ಹಾರಿಸಿದ್ ಧ್ವಜವನ್ನು ಹರಿದು ಕಸದ ತೊಟ್ಟಿಗೆ ಬಿಸಾಡಿರುವ ಆಡಳಿತ ಮಂಡಳಿಯ ಕೃತ್ಯದ ವಿರುದ್ಧ ಆಕ್ರೋಶಗೊಂಡಿರುವ ಸುಮಾರು ಎರಡು ಸಾವಿಕ್ಕೂ ಅಧಿಕ ಕಾರ್ಮಿಕರು ಪ್ರತಿಭಟನೆಗೆ ಇಳಿದಿದ್ದಾರೆ. ಕಂಪೆನಿಯಲ್ಲಿ ನೆರೆಯ ರಾಜ್ಯದ ಅಧಿಕಾರಿಗಳು ಬಂದು ಸೇರಿಕೊಂಡಿದ್ದರಿಂದ ಕನ್ನಡ ಧ್ವಜ ಹಾರಿಸಲು ವಿರೋಧ ವ್ಯಕ್ತವಾಗಿರುವುದಾಗಿ ಕಾರ್ಮಿಕರು ಆರೋಪಿಸಿದ್ದಾರೆ.
ವಜಾಗೊಂಡಿರುವ ನೌಕರರನ್ನು ಕೆಲಸಕ್ಕೆ ಮರುನೇಮಕ ಮಾಡಿಕೊಳ್ಳಬೇಕು, ಇನ್ನು ಮುಂದೆ ಪ್ರತಿ ವರ್ಷ ಕನ್ನಡ ಧ್ವಜ ಹಾರಿಸಲು ಅವಕಾಶ ಮಾಡಿಕೊಡಬೇಕು ಹಾಗೂ ಕನ್ನಡಕ್ಕೆ ಅಪಮಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ. |